ಗರ್ಭಚೀಲ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ರೋಗ ಲಕ್ಷಣ ಶಾಸ್ತ್ರ ವಿಭಾಗದ ವತಿಯಿಂದ ಗರ್ಭಚೀಲ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು . ಸಂಸ್ಥೆಯ ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿಗಳಾದ ಸ್ವಾಮಿ ಎ. ಎಲ್ ರವರು ಕಾರ್ಯಕ್ರಮವನ್ನು ದೀಪ ಬೇಳಗುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಇತರೆ ಜಿಲ್ಲೆಯ ಹೆಸರಾಂತ ರೋಗ ಲಕ್ಷಣ ಶಾಸ್ತ್ರ ಮುಖ್ಯಸ್ಥರುಗಳಾದ ಡಾ. ಅನುರಾಧ ಸಿ.ಕೆ ರಾವ್ , ಡಾ ಅನಿತಾ ಪಿ ಜವಲಗಿ, ಡಾ ಗೀತಾ ದೊಪ್ಪ, ಡಾ ಶೀಲಾದೇವಿ ಡಾ ಸುಚಿತ್ರಾ ಎಸ್, ಸಂಸ್ಥೆಯ ವಿಭಾಗದ ಮುಖ್ಯಸ್ಥರುಗಳಾದ ಡಾ. ರಾಮಚಂದ್ರ ಕಾಮತ್ ಮತ್ತು ಡಾ, ಪದ್ಮಜ ಕುಲಕರ್ಣಿರವರುಗಳು ಪ್ಯಾಪ್ ಸ್ಮೈರ್, ಕ್ಯಾನ್ಸರ್, ಪತ್ತೆ ಹಚ್ಚುವ ಬಗ್ಗೆ ತಡೆಗಟ್ಟುವ ಬಗ್ಗೆ ಹಾಗೂ ಇತ್ತಿಚಿನ ಅತ್ಯಾದುನಿಕಾ ಚಿಕಿತ್ಸಾ ಕ್ರಮಗಳ ಬಗ್ಗೆ ವಿಮರ್ಶೆ ಹಾಗೂ ಅಧ್ಯಾಯನಗಳ ಬಗ್ಗೆ ಚರ್ಚೆ ನಡೆಸಲಾಯಿತು .
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network