Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂಪಾಜೆಯ ಜೇಡ್ಲ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದಲ್ಲಿ ಫೆ.14 ರಂದು ಗೋ ಪ್ರೇಮ ದಿನಾಚರಣೆ

ಸಂಪಾಜೆಯ ಜೇಡ್ಲ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದಲ್ಲಿ ಫೆ.14 ರಂದು ಗೋ ಪ್ರೇಮ ದಿನಾಚರಣೆ

ಮಡಿಕೇರಿ ಫೆ.11 : ಜೇಡ್ಲ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರ ಹಾಗೂ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಶ್ರಯದಲ್ಲಿ ಫೆ.14 ರಂದು ಸಂಪಾಜೆಯ ಜೇಡ್ಲದಲ್ಲಿ ಗೋ ಪ್ರೇಮ ದಿನಾಚರಣೆ ನಡೆಯಲಿದೆ.

ಸಂಪಾಜೆಯ ಜೇಡ್ಲ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಮಧ್ಯಾಹ್ನ 3 ಗಂಟೆಯಿಂದ ವಿದ್ಯಾರ್ಥಿಗಳು ದೇಶಿ ದನಗಳ ಆಲಿಂಗನದ ಮೂಲಕ ತಮ್ಮ ಆರೋಗ್ಯ ವೃದ್ಧಿ ಹಾಗೂ ಪಶುಗಳ ಬಗ್ಗೆ ಪ್ರೇಮ ಬೆಳೆಸಿಕೊಳ್ಳಲು ನಾಂದಿಹಾಡಲಿದ್ದಾರೆ. ಸಾರ್ವಜನಿಕರಿಗೆ ಬೆಳಿಗ್ಗಿನಿಂದಲೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ದೇಶಿ ದನಗಳ ಒಡನಾಟ ಪಡೆದುಕೊಳ್ಳುವಂತೆ ಡಾ.ರಾಜರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.