Header Ads Widget

ಸರ್ಚ್ ಕೂರ್ಗ್ ಮೀಡಿಯ

ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ


ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ

ಮಡಿಕೇರಿ ಫೆ.01: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಡಿ ನಕಲಿ ದಾಖಲಾತಿ ಸೃಷ್ಠಿಸಿ, ಫಲಾನುಭವಿಗಳೆಂದು ನೋಂದಾಯಿತರಾಗಿ ಕಾರ್ಮಿಕರಲ್ಲದವರು ವಿವಿಧ ಧನಸಹಾಯದ ಸೌಲಭ್ಯಗಳನ್ನು ಪಡೆಯುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿರುತ್ತದೆ. 

ಇವರ ನೋಂದಣಿಯನ್ನು ರದ್ದು ಮಾಡುವಂತೆ ಹಾಗೂ ಮಂಡಳಿಯ ಯಾವುದೇ ಸೌಲಭ್ಯಗಳನ್ನು ನೀಡದಂತೆ ತಡೆಹಿಡಿಯಲು ಫೆಬ್ರವರಿ, 25 ರವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಹಮ್ಮಿಕೊಂಡು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಫೆಬ್ರವರಿ, 25 ರವರೆಗೆ ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡ್‍ಗಳನ್ನು ರದ್ದುಪಡಿಸಲು ‘ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ’ ನಡೆಯಲಿದೆ. 

ಈ ಅಭಿಯಾನ ದಿನಗಳಲ್ಲಿ ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದಿರುವ ಫಲಾನುಭವಿಗಳು ತಮ್ಮ ಸ್ವ-ಇಚ್ಚೆಯಿಂದ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಕಚೇರಿಗೆ ತಮ್ಮ ಗುರುತಿನ ಚೀಟಿಗಳನ್ನು ಹಿಂದಿರುಗಿಸಿದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವುದು. ಒಂದು ವೇಳೆ ಈ ಅಭಿಯಾನ ಅವಧಿಯ ಒಳಗೆ ಕಟ್ಟಡ ಕಾರ್ಮಿಕರಲ್ಲದವರು ತಮ್ಮ ಗುರುತಿನ ಚೀಟಿಗಳನ್ನು ಹಿಂದಿರುಗಿಸದ ಪಕ್ಷದಲ್ಲಿ ಮಂಡಳಿಯ ನಿಯಾಮಾನುಸಾರ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಅಧಿಕಾರಿ ಅನಿಲ ಬಗಟಿ ಅವರು ತಿಳಿಸಿದ್ದಾರೆ.