Header Ads Widget

Responsive Advertisement

ಗೋ ಪ್ರೇಮಿ ದಿನ(Cow Hug Day)

ಗೋ ಪ್ರೇಮಿ ದಿನ(Cow Hug Day)

ಸಂಪಾಜೆ ಬಳಿಯ ಜೇಡ್ಲದಲ್ಲಿರುವ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದಲ್ಲಿ  13/02/2023 ಮಂಗಳವಾರ ಗೋ ಪ್ರೇಮಿ ದಿನ(Cow Hug Day) ವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಈ ಸಮಾರಂಭಕ್ಕೆ ಸಂಪಾಜೆ ಪದವಿಪೂರ್ವ ಕಾಲೇಜಿನ‌ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಗೋವುಗಳಿಗೆ ಅರಿಷಿಣ, ಕುಂಕುಮ ಹಚ್ಚಿ ಅವುಗಳಿಗೆ ಹುಲ್ಲನ್ನು ತಿನ್ನಿಸಿ ಸಂಭ್ರಮಿಸಿದರು. ಗೋಶಾಲೆಯ ಕಾರ್ಯಾಧ್ಯಕ್ಷರಾದ ಡಾ.ರಾಜಾರಾಮ್ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಡಿಕೇರಿ‌ ಆಕಾಶವಾಣಿಯ ನಿರೂಪಕಿ, ಗೋಶಾಲೆಯ ಪ್ರಸಾರ ಮಾಧ್ಯಮ ವಿಭಾಗದ ಶ್ರೀಮತಿ ಮಮತಾ ಶಾಸ್ತ್ರಿ ಹಾಗೂ ಕೋಶಾಧಿಕಾರಿಗಳಾದ ಶ್ರೀ ಈಶ್ವರ ಕುಮಾರ ಭಟ್ಟ ಅವರು ದೇಶಿ ಗೋವುಗಳ ಮಹತ್ವದ ಬಗ್ಗೆ ಮಾತನಾಡಿದರು. ‌ಪ್ರಧಾನ‌ ಕಾರ್ಯದರ್ಶಿಗಳಾದ ಶ್ರೀ ವಿಜಯಕೃಷ್ಣ ಕಬ್ಬಿನಹಿತ್ಲು ಗೋಸಾಕಣೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳು ಗೋವಿನ‌ ಗೀತೆಯನ್ನು ಹಾಡಿದರು. 

ಈ ಸಂದರ್ಭ ಗೋಶಾಲೆಯ ಅಧ್ಯಕ್ಷರಾದ ಎನ್.ಟಿ.ರಾಜಗೋಪಾಲ್, ಕೊಡಗು ಹವ್ಯಕ ವಲಯದ ಅಧ್ಯಕ್ಷರಾದ ನಾರಾಯಣ ಮೂರ್ತಿ, ವಲಯದ ವಿವಿಧ ಪದಾಧಿಕಾರಿಗಳು, ಸಂಪಾಜೆ ಪದವಿಪೂರ್ವ ಕಾಲೇಜಿನ ಶ್ರೀ ಶಂಕರನಾರಾಯಣ ಭಟ್, ಪ್ರಾಂಶುಪಾಲೆ ಶ್ರೀಮತಿ‌ ಮಾಲತಿ, ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ವರದಿ: ಶಿಷ್ಯ ಮಾಧ್ಯಮ ವಿಭಾಗ