ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ
ಮಡಿಕೇರಿ: ಸ್ಥಳೀಯ ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 11/03/2023 ರಂದು ನಗರದ ರಾಘವೇಂದ್ರ ದೇವಾಲಯ ರಸ್ತೆಯ ನೇತಾಜಿ ಜಂಕ್ಷನ್ ಬಳಿ ಇರುವ ಶ್ರೀಮತಿ ಹೇಮಾವತಿ ಪ್ರಸನ್ನ ರವರ ಮನೆಯ ಆವರಣದಲ್ಲಿ ನಡೆಸಲಾಯಿತು.
ಶ್ರೀಮತಿ ಲಿಸಿ ಅಮ್ಮಣಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೊಡಗು ಡಿಸಿಸಿ ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಪ್ರೇಮ ಕಾರ್ಯಪ್ಪ ನವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಬಗ್ಗೆ ಮಾತನಾಡುತ್ತಾ ಕುಟುಂಬದಲ್ಲಿ ಮಹಿಳೆಯರು ಪ್ರತಿನಿತ್ಯ ಮಾಡಬೇಕಾದ ಕೆಲಸ ಕಾರ್ಯಗಳ ಜೊತೆಗೆ ಮಕ್ಕಳನ್ನು ಯಾವ ರೀತಿಯಲ್ಲಿ ಸಂಸ್ಕಾರಯುಕ್ತರನ್ನಾಗಿ ಮಾಡಬಹುದು ಇದರೊಂದಿಗೆ ಉತ್ತಮ ಸಮಾಜವನ್ನು ಹೇಗೆ ಕಟ್ಟಬಹುದು ಇತ್ಯಾದಿಗಳನ್ನು ವಿವರವಾಗಿ ತಿಳಿಸಿದರು. ಹಾಗೆ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಸದೃಡ ಭಾರತ ನಿರ್ಮಿಸುವಲ್ಲಿ ತಮ್ಮ ತಮ್ಮ ಜವಾಬ್ಧಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಯುಕ್ತ ಜನನಿ ಮಹಿಳಾ ಮಂಡಳಿಯ ಸದಸ್ಯರಿಗೆ ಹಾಗೂ ಮಹಿಳಯರಿಗೆ ರಸಪ್ರಶ್ನೆ ಕಾರ್ಯಕ್ರಮ, ಗಾದೆಯನ್ನು ಪೂರ್ಣಗೊಳಿಸುವುದು, ಅಕ್ಷರ ಬಂಧ, ಆಶುಭಾಷಾ ಸ್ಪರ್ಧೆ ಮುಂತಾದವುಗಳನ್ನು ಏರ್ಪಡಿಸಲಾಗಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಜನನಿ ಮಹಿಳಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಹೇಮಾವತಿ ಪ್ರಸನ್ನ ರವರು ಕಾರ್ಯಕ್ರಮವನ್ನು ನಿರೂಪಿಸಿದರೆ, ನಿರ್ದೆಶಕರಾದ ಶ್ರೀಮತಿ ಪ್ರೇಮ ಸ್ವಾಗತಿಸಿ, ಖಜಾಂಚಿ ಶ್ರೀಮತಿ ಜಯಪಾಲಕ್ಷರವರು ವಂದಿಸಿದರು. ಅಧ್ಯಕ್ಷರಾದ ಶ್ರೀಮತಿ ರಾಣಿ ಅರುಣ್‌ರವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network