ಮಾರ್ಚ್ 15 ಹಾಗೂ 16ರಂದು ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕೋತ್ಸವ

ಮಾರ್ಚ್ 15 ಹಾಗೂ 16ರಂದು ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕೋತ್ಸವ

ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ನಾಡ್ ಈಶ್ವರ ದೇವರ ವಾರ್ಷಿಕೋತ್ಸವ ಇದೇ ಮಾರ್ಚ್ 15 ಹಾಗೂ 16ರಂದು ನಡೆಯಲಿದೆ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಅಥವಾ ಈಶ್ವರ ದೇವಸ್ಥಾನಕ್ಕೆ ಶತಶತಮಾನಗಳ ಇತಿಹಾಸವಿದ್ದು, ಇದರ ವಾರ್ಷಿಕ ಉತ್ಸವ ಈಗಾಗಲೇ ಮಾರ್ಚ್ 8ರಂದು ಸಂಜೆ ಕೊಡಿಮರ ನಿಲ್ಲಿಸುವುದರ ಮೂಲಕ ಆರಂಭಗೊಂಡಿದ್ದು 15/03/2023ರಂದು ನೆರ್ಪು ಹಾಗೂ 16/03/2023ರಂದು ದೇವರ ಅವಭೃತ ಸ್ಥಾನ (ದೇವ ಕುಳಿಪೊ) ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಕುಂದಾ, ಮುಗುಟಿಗೇರಿ, ಈಚೂರು, ಹುದೂರು, ಹಳ್ಳಿಗಟ್ಟು, ಅರ್ವತೋಕ್ಲು ಈ ಆರು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನದಲ್ಲಿ (ಕುಂದಾ ಬೆಟ್ಟದ ಕೆಳಗಿರುವ ಈಶ್ವರ ದೇವಸ್ಥಾನ) 8/03/2023ರಿಂದ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಉತ್ಸವ ಮೂರ್ತಿ ಹೊರಗೆ ಬರುವ ಮೂಲಕ ವಿಶೇಷ ಪೂಜೆ ಸೇರಿದಂತೆ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, 13/03/2023 ಹಾಗೂ 14/03/2023ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಯ ಜೊತೆಗೆ ಈ ಎರಡು ದಿವಸ ಮಧ್ಯಾಹ್ನ ವಿಶೇಷ "ಹರಕೆ ಬೊಳಕ್" ಪೂಜೆ ಏರ್ಪಡಿಸಲಾಗಿದೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಇರುತ್ತದೆ.

ಅದೇ ರೀತಿ 15/03/2023 ಹಾಗೂ 16/03/2023ರಂದು ದೊಡ್ಡ ಹಬ್ಬ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಲು ತಕ್ಕಮುಖ್ಯಸ್ಥರು ಕೋರಿದ್ದಾರೆ. ಉತ್ಸವದ ಅನ್ನಸಂತರ್ಪಣೆಗೆ ಅಕ್ಕಿ, ತರಕಾರಿ ಎಣ್ಣೆ ಸೇರಿದಂತೆ ವಿವಿಧ ಹರಕೆ ವಸ್ತುಗಳನ್ನು ನೀಡುವವರು ದೇವಸ್ಥಾನಕ್ಕೆ ನೇರವಾಗಿ ತಂದು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ: 9901262398, 9448260995 ಅಥವಾ 9448620974 ಸಂಪರ್ಕಿಸಬಹುದು.

Previous Post Next Post