Header Ads Widget

ಸರ್ಚ್ ಕೂರ್ಗ್ ಮೀಡಿಯ

ಏಪ್ರಿಲ್‌ 13 ಮತ್ತು 14 ರಂದು ಕಾಂತೂರು ಗ್ರಾಮದ ಪನ್ನಂಗಾಲ ತಾಯಿ ದೇವಸ್ಥಾನದ ವಾರ್ಷಿಕೋತ್ಸವ

ಮೂರ್ನಾಡು: ಇಲ್ಲಿನ ಕಾಂತೂರು ಗ್ರಾಮದ ಪನ್ನಂಗಾಲ ತಾಯಿ ದೇವಸ್ಥಾನದ ವಾರ್ಷಿಕೋತ್ಸವ ಹಬ್ಬವು ದಿನಾಂಕ 13 ಮತ್ತು 14 ರಂದು ನಡೆಯಲಿದೆ. 

ತಾರೀಕು 13ರಂದು ದೇವರ ಶುದ್ದ ಕಳಸ, ಕೆರೆಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ, ದೇವರ ದರ್ಶನ ಮತ್ತು ರಾತ್ರಿ 7 ಗಂಟೆಗೆ ಕುರುಂದ ಬಾರಣಿ ಇರುತ್ತದೆ. ತಾರೀಕು 14ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಚಾಮುಂಡಿ ಉತ್ಸವ, ಕುರುಂದಾಟ ಮತ್ತು ದೇವರ ಜಳಕ ಜರುಗಲಿದೆ ಎಂದು ದೇವಸ್ಥಾನದ ಅಧ್ಯಕ್ಷರು ಮತ್ತು ತಕ್ಕ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.