Header Ads Widget

ಸರ್ಚ್ ಕೂರ್ಗ್ ಮೀಡಿಯ

ಕ್ರೀಡೆಯಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು; ಒಲoಪಿಯನ್‌ಗಳಾದ ಸೋಮಣ್ಣ, ಸುಬ್ಬಯ್ಯ ಕರೆ

ಆಸಕ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದೆಯೆಂದು  ಒಲಂಪಿಯನ್‌ಗಳಾದ ಮನೆಯಪಂಡ ಸೋಮಯ್ಯ ಹಾಗೂ ಅಂಜಪರವoಡ ಸುಬ್ಬಯ್ಯ ಅವರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಡಿಕೇರಿಯ ಜ.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ದಿ.ಶಂಕರ್ ಸ್ವಾಮಿ ಸ್ಮರಣಾರ್ಥ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಬಾಗವಹಿಸಿ ಅವರು ಮಕ್ಕಳಿಗೆ ಹಿತವಚನ ನುಡಿದರು. ಸೊಮಯ್ಯ ಮಾತನಾಡಿ; ಇಂತಹ ಶಿಬಿರಗಳಿಂದ ಸಾಕಷ್ಟು ಕಲಿಯಬಹುದಾಗಿದೆ. ಜೀವನದಲ್ಲಿ ಐದು ಎಸ್‌ಗಳನ್ನು, ಅಂದರೆ ‘ಸ್ಪೀಡ್, ಸ್ಟೆಂಟ್, ಸ್ಟೆಮಿನಾ, ಸ್ಕಿಲ್ ಹಾಗೂ ಸ್ಪೋರ್ಟ್ಸ್ಮೆನ್‌ಶಿಪ್’ ಇವುಗಳನ್ನು ಅಳವಡಿಸಿಕೊಂಡರೆ ಉತ್ತಮ ಕ್ರಿಡಾಪಟು ಹಾಗೂ ಉತ್ತಮ ಮನುಜನಾಗಲು ಸಾಧ್ಯವಾಗುತ್ತದೆ ಹಾಗೆ ಉತ್ತಮ ಭವಿಷ್ಯ ರುಪಿಸಿಕೊಳ್ಳಲು ಸಹಕಾರಿಯಾಗುತ್ತದೆ  ಎಂದು ಹೇಳಿದರು.

ಎ.ಬಿ.ಸುಬ್ಬಯ್ಯ ಮಾತನಾಡಿ; ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯ. ಸಮಾಜದಲ್ಲೂ ಗುರುತಿಸಲ್ಪಡುತ್ತಾರೆ, ಮಕ್ಕಳು ಟಿವಿ, ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಶಾರೀರಿಕ ದೃಢತೆ ಇದ್ದರೆ ಜೀವನವನ್ನು ಸಂತೋಷದಿoದ ಕಳೆಯಬಹುದು. ಕ್ರಿಡೆಯಿಂದ ಇದು ಸಾಧ್ಯವಾಗಲಿದೆ. ಶಿಬಿರದಲ್ಲಿ ಕಲಿಸುವದನ್ನು ನಿರಂತರ ಅಭ್ಯಾಸ ಮಾಡಬೇಕು. ಇಲ್ಲಿ ತರಬೇತುದಾರರು ತಮ್ಮ ಸಮಯವನ್ನು ನಿಮಗಾಗಿ ಮೀಸಲಿರಿಸಿ ಕಲಿಸಿಕೊಡುತ್ತಿದ್ದಾರೆ. ಇದು ನಿಮ್ಮ ಜೀವನದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ ಬಾಬು ಸೊಮಯ್ಯ, ತರಬೇತುದಾರರಾದ ಬೊಪ್ಪಂಡ ಶಾಂ ಪೂಣಚ್ಚ, ಕಿರುಂದoಡ ಗಣೇಶ್, ಕುಡೆಕಲ್ ಸಂತೋಷ್, ಅಶೋಕ್ ನಾಯ್ಡು, ಹರೇಂದ್ರ ಇದ್ದರು.