Header Ads Widget

ಸರ್ಚ್ ಕೂರ್ಗ್ ಮೀಡಿಯ

ಏ.20 ರಂದು ಕಾಫಿ ಬೆಳೆಯ ರಕ್ಷಣೆ ಮತ್ತು ಪೋಷಣೆ ಕುರಿತು ಸಲಹೆ

ಏ.20 ರಂದು ಕಾಫಿ ಬೆಳೆಯ ರಕ್ಷಣೆ ಮತ್ತು ಪೋಷಣೆ ಕುರಿತು ಸಲಹೆ

ಮಡಿಕೇರಿ: ಮಡಿಕೇರಿ ಆಕಾಶವಾಣಿಯಿಂದ ಏಪ್ರಿಲ್, 20 ರಂದು ಸಂಜೆ 6.50 ಕ್ಕೆ ಪ್ರಸ್ತುತ ಧಗೆಯ ಪರಿಸ್ಥಿತಿಯಲ್ಲಿ ಕಾಫಿ ಬೆಳೆಯ ರಕ್ಷಣೆ ಮತ್ತು ಪೋಷಣೆ ಕುರಿತು ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಎಸ್.ಎಲ್.ಪಾಟೀಲ್ ಅವರ ವಿವರವಾದ ಸಲಹೆಗಳ ಕಾರ್ಯಕ್ರಮವು ಪ್ರಸಾರವಾಗುತ್ತಿದೆ. ಉಪಯುಕ್ತ ವಿಚಾರಗಳಿವೆ. ಕಾಫಿ ಬೆಳೆಗಾರರು ತಪ್ಪದೇ ಆಲಿಸಿ, ಹಾಗೆಯೇ ಇತರರಿಗೂ ತಿಳಿಸಿ ರೇಡಿಯೊ ಮೂಲಕ ಇಲ್ಲವೇ newsonairapp ಸಹಾಯದಿಂದ ಕಾರ್ಯಕ್ರಮ ಕೇಳಬಹುದು ಎಂದು ಮಡಿಕೇರಿ ಆಕಾಶವಾಣಿ ನಿಲಯದ ಕಾರ್ಯಕ್ರಮ ನಿರ್ವಾಹಕರಾದ ವಿಜಯ ಅಂಗಡಿ ಅವರು ತಿಳಿಸಿದ್ದಾರೆ.