Header Ads Widget

ಸರ್ಚ್ ಕೂರ್ಗ್ ಮೀಡಿಯ

ರಿಯಾಯ್ತಿ ದರದಲ್ಲಿ ಗಿಡ ಪಡೆಯಲು ಅವಕಾಶ

ರಿಯಾಯ್ತಿ ದರದಲ್ಲಿ ಗಿಡ ಪಡೆಯಲು ಅವಕಾಶ

ಮಡಿಕೇರಿ: ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಸಸ್ಯ ಕ್ಷೇತ್ರದಲ್ಲಿ 2023-24 ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿ ಬೆಳೆಸಲಾಗಿರುತ್ತದೆ. 

ಮಹಾಗನಿ, ಶಿವನೆ, ಸಿಲ್ವರ್, ಬೀಟೆ, ಮಳೆ ಮರ, ನೇರಳೆ, ಸುಬಾಬುಲ್, ಹಲಸು, ದೂಪ, ನಿಂಬೆ, ಅಗಸೆ, ಬೆಟ್ಟದನೆಲ್ಲಿ, ಸೀಬೆ, ಮುಂತಾದ ಸಸಿಗಳು ಲಭ್ಯವಿದ್ದು, ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಷ್ಕøತ ಆದೇಶದಂತೆ ರೂ.3 ಹಾಗೂ ರೂ.6 ಪ್ರತಿ ಸಸಿಗೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ತಮ್ಮ ಜಮೀನಿನ ಆರ್‍ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು ಹಾಗೂ ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ನೆಟ್ಟ 100 ಸಸಿಗಳಿಗೆ ಸುಮಾರು 8000-10,000 ರೂ.ಗಳ ಪೆÇ್ರೀತ್ಸಾಹ ಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಉಪ ವಲಯ ಅರಣ್ಯ ಅಧಿಕಾರಿಗಳು 9743722646, ಗಸ್ತು ಅರಣ್ಯ ಪಾಲಕರು 7975952388 ನ್ನು ಸಂಪರ್ಕಿಸಬಹುದು ಎಂದು ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.