ಕಡಂಗ ಬದ್ರಿಯಾ ಸುನ್ನೀ ಮುಸ್ಲಿಂ ಜಮಾಅತ್ ವಾರ್ಷಿಕ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್ ಅರಫಾ ಆಯ್ಕೆ
ಕಡಂಗ ಬದ್ರಿಯಾ ಸುನ್ನೀ ಮುಸ್ಲಿಂ ಜಮಾಅತ್ ಇದರ ವಾರ್ಷಿಕ ಮಹಾಸಭೆ ಸ್ಥಳೀಯ ಬದ್ರಿಯಾ ಮದರಸ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಸೈನ್ ಸಖಾಫಿ ಎಮ್ಮೆಮಾಡು ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ನಡೆಸಿದರೆ, ಸ್ವಾಗತವನ್ನು ಅಬ್ದುಲ್ ಸಲಾಂ, ವರದಿಯನ್ನು ಕಾರ್ಯದರ್ಶಿ ಆಶಿಕ್ ನೆರವೇರಿಸಿ, ಲೆಕ್ಕ ಪತ್ರವನ್ನು ಜೊತೆ ಕಾರ್ಯದರ್ಶಿ ನೌಶಾದ್ ಮಂಡಿಸಿದರು. ನಂತರ ಹಲವಾರು ಚರ್ಚೆಗಳು ನಡೆದು ಅದಕ್ಕೆ ಜಮಾಅತ್ ಅಧ್ಯಕ್ಷರಾದ ಸುಲೈಮಾನ್ ಪ್ರತಿಕ್ರಿಹಿಸಿ ಉತ್ತರಿಸಿದರು.
ಮಹಾಸಭೆಯಲ್ಲಿ 2023-24 ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್ ಅರಫಾ, ಉಪಾಧ್ಯಕ್ಷರಾಗಿ ಉಸ್ಮಾನ್ ಕೆ.ಇ.ಪ್ರಧಾನ ಕಾರ್ಯದರ್ಶಿಯಾಗಿ ರಾಶೀದ್ ಯು.ಇ. ಕೋಶಾಧಿಕಾರಿಯಾಗಿ ರಜಾಕ್ ಸಿ.ಎ.ಜೊತೆ ಕಾರ್ಯದರ್ಶಿಯಾಗಿ ನೌಫಲ್ ಎಂ.ಬಿ. ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಹಾಶಿಮ್, ಕರೀಂ, ಅಶ್ರಫ್, ಸುಹೈಲ್, ರಝಕ್ ಕೆ.ಎ. ಸಹದ್ ರವರನ್ನು ಆಯ್ಕೆ ಮಾಡಲಾಯಿತು. ನಿರೂಪಣೆಯನ್ನು ಅಶ್ರಫ್ ಹಾಗೂ ರಶೀದ್ ಐಬಿಎಂ ನೆರವೇರಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network