ಮಡಿಕೇರಿ ಸಂಚಾರಿ ಪೊಲೀಸರಿಂದ ಕಳಕಳಿಯ ಮನವಿ
ಮಡಿಕೇರಿ ನಗರದ GT ವೃತ್ತದ ಬಳಿ ಇರುವ ಮೂರ್ನಾಡ್ ಜಂಕ್ಷನ್ ನಲ್ಲಿ ಮಡಿಕೇರಿ ನಗರ ಸಭೆ ವತಿಯಿಂದ ನೂತನವಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ಮಡಿಕೇರಿ ಸಂಚಾರಿ ಪೊಲೀಸರಿಂದ ಬಸ್ಸು ಮಾಲೀಕರು / ಚಾಲಕರು / KSRTC ಬಸ್ಸು ಚಾಲಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಈ ಮೊದಲು ಪ್ರಯಾಣಿಕರು ಆಟೋ ನಿಲ್ದಾಣ ಹತ್ತಿರ ನಿಂತು ಬಸ್ಸುಗಳನ್ನು ಕಾಯಬೇಕಾಗಿತ್ತು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೇ ಸಾಕಷ್ಟು ಅಡಚಣೆ ಉಂಟಾಗುತ್ತಿದ್ದು. ಎಲ್ಲರಿಗೂ ಸಮಸ್ಯೆ ಆಗುತ್ತಿದೆ. ಇಂದಿನಿಂದ ಮಡಿಕೇರಿಯಿಂದ ಮೂರ್ನಾಡ್ ಮಾರ್ಗವಾಗಿ ತೇರಳುವ ಬಸ್ಸು ಪ್ರಯಾಣಿಕರು ಕಡ್ಡಾಯವಾಗಿ ನೂತನ ಬಸ್ಸು ತಂಗುದಾಣ ದಿಂದ ಬಸ್ಸು ಹತ್ತಬೇಕಾಗಿ ಹಾಗೂ ಬಸ್ಸು ಮಾಲೀಕರು / ಚಾಲಕರು ಬಸ್ಸುಗಳನ್ನು ಕಡ್ಡಾಯವಾಗಿ ನೂತನ ತಂಗುದಾಣದ ಮುಂಭಾಗದಲ್ಲಿ ನಿಲುಗಡೆ ಮಾಡಿ, ಪ್ರಯಾಣಿಕರಿಗೆ ಬಸ್ಸು ಹತ್ತಲು ಅವಕಾಶ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಲು ಮಡಿಕೇರಿ ಸಂಚಾರಿ ಪೊಲೀಸ್ ಠಾಣಾ ವತಿಯಿಂದ ವಿನಂತಿಸಿ ಕೊಳ್ಳಲಾಗಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network