ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಅಡಿಯಲ್ಲಿ ಹಣಕಾಸಿನ ಸೌಲಭ್ಯ
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಅಡಿಯಲ್ಲಿ ರೈತರು ಉದ್ದಿಮೆದಾರರು ಯಾವುದೇ ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿಕೊಳ್ಳಲು ಬಯಸಿದಲ್ಲಿ ಅಂತವರಿಗೆ ಬ್ಯಾಂಕ್ ಮೂಲಕ ಸಾಲದ ರೂಪದಲ್ಲಿ ಯೋಜನೆಗೆ ಬೇಕಾಗುವ ಹಣಕಾಸಿನ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗೂ ಸರ್ಕಾರದಿಂದ ಶೇಕಡ 50 ಸಬ್ಸಿಡಿಯಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.
1) ಅಭ್ಯರ್ಥಿಗಳ ವಂತಿಗೆ ಹತ್ತು ಪರ್ಸೆಂಟ್
2) ಬ್ಯಾಂಕುಗಳಿಂದ 40 ಪರ್ಸೆಂಟ್ ಸಾಲ
3) 50% ಸರ್ಕಾರದಿಂದ ಸಹಾಯಧನ (ಕ್ರೆಡಿಟ್ ಲಿಂಕ್ಡ್
ಬ್ಯಾಕೆಂಡ್ ಸಹಾಯಧನ)
ಉದಾಹರಣೆಗೆ,
ಕಾಫಿ ಪುಡಿ ಸಂಸ್ಕರಣಾ ಯಂತ್ರ, ಚಾಕೊಲೇಟ್ ತಯಾರಿಸುವ ಯಂತ್ರ, ಜಾಮ್ಸ್ ಜೆಲಿಸ್ಸ್ ತಯಾರಿಕ ಯಂತ್ರ, ಬೇಕರಿ ಘಟಕ, ತೆಂಗಿನ ಎಣ್ಣೆ ತೆಗೆಯುವ ಯಂತ್ರ, ಉಪ್ಪಿನಕಾಯಿ ಮಾಡುವ ಯಂತ್ರ ಘಟಕ, ಮಸಾಲ ಪುಡಿ ಮಾಡುವ ಯಂತ್ರ, ಹಸಿಮೆಣಸಿ ಪೈಸ್ಟ್ ಮಾಡುವ ಯಂತ್ರ, ಚಿಪ್ಸ್ ಮಾಡುವ ಮಿಷನ್, ಪಾಪಡ್ ಮಾಡೋ ಮಷೀನ್, ನೂಡಲ್ಸ್ ಶಾವಿಗೆ ಮಷೀನ್, ಜ್ಯೂಸ್ ಪ್ರೊಸೆಸಿಂಗ್ ಮಷೀನ್, ರವಾ ಮಾಡುವ ಮಷೀನ್, ದಾಲ್ ಮಾಡುವ ಮಷೀನ್ ಹಾಗೂ ಯಾವುದೇ ಆಹಾರದ ಮೌಲ್ಯವರ್ಧನೆ ಗೊಳಿಸಲು ಬೇಕಾಗುವ ಮಷೀನ್ ಗಳನ್ನು ಪಡೆಯಬಹುದಾಗಿದೆ. ಆಸಕ್ತ ರೈತರು /ಸ್ವಸಹಾಯ ಸಂಘದವರು, ಎಫ್.ಪಿ.ಓ, ಉದ್ದಿಮೆದಾರರು ಈ ಕೆಳಗಿನ ದಾಖಲಾತಿಗಳೊಂದಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
1) ಆಧಾರ್ ಕಾರ್ಡ್ ಒರಿಜಿನಲ್
2) ಪ್ಯಾನ್ ಕಾರ್ಡ್ ಒರಿಜಿನಲ್
3) ಎರಡು ಬ್ಯಾಂಕ್ ಪಾಸ್ ಬುಕ್
4) ಬ್ಯಾಂಕ್ ಸ್ಟೇಟ್ ಮೆಂಟ್ ಆರು ತಿಂಗಳು
5) ರೇಷನ್ ಕಾರ್ಡ್/ಎಲೆಕ್ಟ್ರಿಸಿಟಿ ಬಿಲ್
6) ವಿದ್ಯಾರ್ಹತೆ ಪ್ರಮಾಣ ಪತ್ರ
7) ತಾವು ಅಳವಡಿಸುವ ಆಹಾರ ಸಂಸ್ಕರಣ ಘಟಕಕ್ಕೆ ಬೇಕಾಗುವ ಮಷೀನುಗಳ ಕೊಟೇಶನ್ನು ಸರಬರಾಜುದಾರ ರಿಂದ ಪಡೆದಿರಬೇಕು.
8) ಗ್ರಾಮ ಪಂಚಾಯತಿ ಪರವಾನಿಗೆ ಪತ್ರ.
9) ಶಡ್ ಅಥವಾ ಮನೆಯ ಉತಾರ.
10) ಘಟಕ ಅಳವಡಿಸುವ ಜಾಗದ ಫೋಟೋ
11) ತಾವು ಸಾಲ ತೆಗೆದುಕೊಳ್ಳುವ ಬ್ಯಾಂಕ್ ಮ್ಯಾನೇಜರ್ ಫೋನ್ ನಂಬರ್.
ಮೇಲಿನ ಎಲ್ಲಾ ದಾಖಲಾತಿಗಳು ಒರಿಜಿನಲ್ ತರಬೇಕು ಹಾಗೂ ಘಟಕ ಅಳವಡಿಸುವವರ ಹೆಸರಿನಲ್ಲಿಯೇ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀಮತಿ ನೀರಜಾ
ಜಿಲ್ಲಾ ಸಂಪನ್ಮೂಲ ವ್ಯಕ್ತಿ (ಪಿಎಂಎಪ್ಎಂ ಯೋಜನೆ)
ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ
ಮೊಬೈಲ್ ನಂಬರ್ :8861422540/8217305192
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network