Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಡಪಾಲದಲ್ಲಿ ಮನೆಯ ಗೋಡೆ ಕುಸಿತ

ಎಡಪಾಲದಲ್ಲಿ ಮನೆಯ ಗೋಡೆ ಕುಸಿತ

ಚೆಯ್ಯಂಡಾಣೆ ಜು 27: ನಿನ್ನೆ ರಾತ್ರಿ ಸುರಿದ ಮಳೆ ಗಾಳಿಗೆ ನರಿಯಂದಡ ಗ್ರಾಮದ ಎಡಪಾಲದ ಜುನೈದ್ ಕೆ.ಎ.ರವರ ಮನೆಯ ಗೋಡೆ ಕುಸಿದು ಬಿದ್ದಿದೆ ಹಾಗೂ ಮನೆ 30 ರಿಂದ 35% ಹಾನಿಯಾಗಿದೆ,ಮನೆಯ ಒಳಗಡೆ ಇದ್ದ ಪಾತ್ರೆ ಮತ್ತಿತರರು ವಸ್ತುಗಳಿಗೆ ಹಾನಿಯಾಗಿದೆ ಸ್ಥಳಕ್ಕೆ ಕಂದಾಯ ಪರಿವಿಕ್ಷಕ ರವಿಕುಮಾರ್, ಉಪ ತಹಶೀಲ್ದಾರ್ ಸುನಿಲ್ ಕುಮಾರ್, ಗ್ರಾಮ ಲೆಕ್ಕಿಗ ಜನಾರ್ದನ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ,ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ