Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ಕೊಡವ ಸಮಾಜ ನಿರ್ದೇಶಕ ಅಪ್ಪಣ್ಣ ಮೇಲೆ ಹಲ್ಲೆ ಪ್ರಕರಣ ಕಠಿಣ ಕ್ರಮಕ್ಕೆ ಗರ್ವಾಲೆ ಕೊಡವ ಸಮಾಜ ಆಗ್ರಹ

ಮಡಿಕೇರಿ ಕೊಡವ ಸಮಾಜ ನಿರ್ದೇಶಕ ಅಪ್ಪಣ್ಣ ಮೇಲೆ ಹಲ್ಲೆ ಪ್ರಕರಣ ಕಠಿಣ ಕ್ರಮಕ್ಕೆ ಗರ್ವಾಲೆ ಕೊಡವ ಸಮಾಜ ಆಗ್ರಹ

ಮಡಿಕೇರಿ ನಗರ ಸಭೆ  ಸದಸ್ಯ, ಮತ್ತು ಮಡಿಕೇರಿ ಕೊಡವ ಸಮಾಜ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲೆ ಗುಂಪು ಹಲ್ಲೆ ಮಾಡಿರುವ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗರ್ವಾಲೆ ಕೊಡವ ಸಮಾಜ ಆಗ್ರಹಿಸಿದೆ. 

ಈ ಕುರಿತು ಮಾದ್ಯಮ ಹೇಳಿಕೆ ನೀಡಿರುವ ಅಧ್ಯಕ್ಷ ಸರ್ಕಂಡ ಎ. ಗಣಪತಿ, ಕಾರ್ಯದರ್ಶಿ ತಾಚಮಂಡ ಎನ್. ಈರಪ್ಪ ಮತ್ತು ಪದಾಧಿಕಾರಿಗಳು, ಆರೋಪಿಗಳ ವಿರುದ್ದ ತಕ್ಷಣ ಕಠಿಣ ಕ್ರಮ ಕೈಗೊಂಡು, ಮುಂದೆ ಜಿಲ್ಲೆಯಲ್ಲಿ ಇಂತ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು, ನಗರಸಭಾ ಸದಸ್ಯನಿಗೇ  ರಕ್ಷಣೆ ಇಲ್ಲದೆ ಗುಂಪು ಹಲ್ಲೆ ಆಗುತ್ತಿರುವುದು ಭವಿಷ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯ ಲಕ್ಷಣ.  ಕಾನೂನು ಸಂಬಂಧಿತ ಏನೇ ಭಿನ್ನಾಭಿಪ್ರಾಯ ಇದ್ದರೂ ಸಂಭಂದಿಸಿದ ಇಲಾಖೆಗಳ ಮೂಲಕ ಕಾನೂನಾತ್ಮಕವಾಗ ಕ್ರಮ ಜರುಗಿಸಬೇಕೇ ವಿನಹ, ಕಾನೂನು ಕೈಗೆತ್ತಿಕೊಳ್ಳುವುದಲ್ಲ. ಹಲ್ಲೆ ಮಾಡಿರುವ ಆರೋಪಿಗಳು ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಅಲ್ಲದೆ ಆ ಪ್ರದೇಶದಲ್ಲಿ ಭಯ ಹುಟ್ಟಿಸುವ ನಡವಳಿಕೆಗಳನ್ನು ಸಾರ್ವಜನಿಕರು ಗಮನಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಮಡಿಕೇರಿ ಸೇರಿದಂತೆ ಕೊಡಗಿನ ನಾನಾ ಭಾಗಗಳಲ್ಲಿ ಪುಡಿ ರೌಡಿಗಳ ಹಾವಳಿ ಅಧಿಕವಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಗಳೇ ಬೇರೆ ಬೇರೆ ಆಯಾಮಗಳಿಗೆ ತಿರುವು ಪಡೆದುಕೊಂಡು, ಜಿಲ್ಲೆಯಲ್ಲಿ ಗೊಂದಲ ಮತ್ತು ಅಶಾಂತಿಯ ವಾತಾವರಣ ಸೃಷ್ಟಿಯಾಗುವುದನ್ನು ಈಗಲೇ ತಡೆಯಬೇಕು. ತಪ್ಪಿದಲ್ಲಿ ವಿವಿಧ ಸಂಘಟನೆಗಳು ತೆಗೆದುಕೊಳ್ಳುವ ಕ್ರಮಕ್ಕೆ ಗರ್ವಾಲೆ ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡಲಿದೆ ಎಂದು  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.