Header Ads Widget

Responsive Advertisement

ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ: ಹುತಾತ್ಮ ವೀರ ಯೋಧರ ತಾಯಿ ದ್ವಜಾರೋಹಣ

ಚೆಯ್ಯ0ಡಾಣೆ: ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಕರಡ ಗ್ರಾಮದ ಹುತಾತ್ಮ ವೀರಯೋಧ ಬಾಚುರ ದೇವಯ್ಯನವರ ತಾಯಿ ಬಿ.ಎಸ್. ಕಾಮವ್ವ ಕುಟುಂಬ ಸಮೇತ ಆಗಮಿಸಿ ದ್ವಜಾರೋಹಣವನ್ನು ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಎಚ್ ಎಂ ಲೋಕೇಶ್ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬಿಜಿ ಪೊನ್ನಪ್ಪ ಐತಿಚಂಡ ಉಷಾ ನಾಣಯ್ಯ ಹಾಗೂ  ಬಿ.ಪಿ. ದೇವಕ್ಕಿ ಆಗಮಿಸಿದರು.

ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಿಜಿಟಲ್ ಗ್ರಂಥಾಲಯದ ಗ್ರಂಥಪಾಲಕಿ  ರೆನ್ನಿ ಗ್ರಂಥಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿ ಸಂವಿಧಾನ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞೆಯನ್ನು ಬೊದಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಎಸ್. ಈರಪ್ಪ ಸಲಹಾ ಸಮಿತಿಯ ಸದಸ್ಯರಾದ ಐತಿಚಂಡ ಸುಬ್ರಮಣಿ, ನಡಿಕೇರಿಯಂಡ ಸೋಮಯ್ಯ, ಅಂಗನವಾಡಿ ಕಾರ್ಯಕರ್ತೆ ಈಶ್ವರಿ, ಎಸ್ ಡಿ ಎಂ ಸಿ ಸದಸ್ಯರು,ಪೋಷಕರು,ಶಿಕ್ಷಕ ವೃಂದದವರು ಹಾಜರಿದ್ದರು.

ಬಿದ್ದೇರಿಯಂಡ ಈಶ ದೇವಯ್ಯ ನವರು ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ನೀಡಿದರು.

ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಐತಿಚಂಡ ಸುಬ್ರಮಣಿ, ನಡಿಕೇರಿಯಂಡ ಸೋಮಯ್ಯ,ಐತಿಚಂಡ ಉಷಾ ನಾಣಯ್ಯ ನವರು ನಗದು ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿ, ಸಹ ಶಿಕ್ಷಕಿ ದಮಯಂತಿ ವಂದಿಸಿದರು. ಕೊನೆಯಲ್ಲಿ ಅತಿಥಿಗಳು ನೀಡಿದ ಸಿಹಿಯನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ