Header Ads Widget

Responsive Advertisement

ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ

ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ 77ನೇ ಸ್ವಾತಂತ್ರೋತ್ಸವ  ಆಚರಣೆ

ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ 77 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ದ್ವಜಾರೋಹಣವನ್ನು ಶಾಲಾ ಮುಖ್ಯ ಶಿಕ್ಷಕಿ ಬಿ.ಎಸ್.ಭವ್ಯ ನೆರವೇರಿಸಿ ದಿನದ ಮಹತ್ವದ ಕುರಿತು ಮಾತನಾಡಿದರು.

ನಂತರ ದೈಹಿಕ ಶಿಕ್ಷಕ ಪಿ.ಬಿ. ಪೊನ್ನಪ್ಪ ನೇತೃತ್ವದಲ್ಲಿ ಶಾಲೆಯಿಂದ ಚೆಯ್ಯ0ಡಾಣೆ ಪಟ್ಟಣದ ವರೆಗೆ ಬ್ಯಾಂಡ್ ನೊ0ದಿಗೆ ಪಥಸಂಚಲನದಲ್ಲಿ ಸ್ಕೌಟ್ ತಂಡ, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದರು.

ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ,, ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 ಶಿಕ್ಷಕರುಗಳಾದ ಎಚ್.ಕೆ.ರಾಜ್ ಕುಮಾರ್,  ಕೆ.ಡಿ. ಹೇಮಾಮಾಲಿನಿ, ರವೀಂದ್ರ ನಾಥ್ ರವರು ಕಾರ್ಯಕ್ರಮದಲ್ಲಿ ಕ್ರಮವಾಗಿ ಸ್ವಾಗತ, ವಂದನೆ ಮತ್ತು ನಿರೂಪಣೆಯನ್ನು ನೆರವೇರಿಸಿದರು.

ಈ ಸಂಧರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ