ಚಾಮಿಯಾಲ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಚೆಯ್ಯ0ಡಾಣೆ: ಚಾಮಿಯಾಲ ಜುಮಾ ಮಸೀದಿ ಹಾಗೂ ಸ್ಥಳೀಯ ಮದರಸ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ದ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷ ಅಬ್ದುಲ್ ಮಜೀದ್ ನೆರವೇರಿಸಿದರು.
ಈ ಸಂದರ್ಭ ಮಸೀದಿಯ ಖತೀಬ್ ಉವೈಸ್ ಔಹರಿ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ನೆರೆದಿದ್ದವರಿಗೆ ವಿವರಿಸಿ ಮಾತನಾಡಿದರು.
ಈ ಸಂದರ್ಭ ಮದರಸ ಶಿಕ್ಷಕರಾದ ನಿಝಾರ್ ಫಾಝಿಲಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ಹನೀಫ್,ಮುಯ್ಯದ್ದೀನ್ ಸಖಾಫಿ,ಆಡಳಿತ ಮಂಡಳಿ ಸದಸ್ಯರು,ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network