ಕಡಂಗ ವಿವಿದೋದ್ದೇಶ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಕೋಡಿರ.ಎಂ.ತಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ನಂಬಿಯಪಂಡ.ಎ.ಅಯ್ಯಮ್ಮ ಅವಿರೋಧ ಆಯ್ಕೆ
ಕಡಂಗ ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೋಡಿರ.ಎಂ.ತಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ನಂಬಿಯಪಂಡ.ಎ.ಅಯ್ಯಮ್ಮ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಇಂದು ಸಂಘದ ಕಛೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಳಿದಂತೆ ನಿರ್ದೇಶಕರಾಗಿ ಕೋಡಿರ. ಎಂ.ನಾಣಯ್ಯ, ಐತಿಚಂಡ. ಪಿ.ಮಾದಯ್ಯ, ಪಾಂಡಂಡ. ಎಂ.ಸುಬ್ರಮಣಿ, ಮೇದುರ. ಎನ್.ಕುಶಾಲಪ್ಪ, ನೆಲ್ಲಚಂಡ. ಟಿ.ಕಿರಣ್ ಕಾರ್ಯಪ್ಪ, ಬೆಪುಡಿಯಂಡ. ಎಸ್. ಜಾನ್ಸಿ, ಕೆ.ಜೆ. ಶಾರದ, ಕೈಪಂಗಡ. ಕೆ. ಉತ್ತಪ್ಪ, ಸೊಮ್ಮಯ್ಯ.ಎಂ.ಎ, ಗಂಗಮ್ಮ ಹೆಚ್.ಕೆ, ಐತಿಚಂಡ. ಕೆ. ವನಿತಾರವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಚುನಾವಣೆ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಸಂದೀಪ್ ಬಿ.ಜಿ. ನಿರ್ವಹಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network