Header Ads Widget

Responsive Advertisement

ಬಿಟ್ಟಂಗಾಲ ಗ್ರಾ. ಪಂ. ನೂತನ ಅಧ್ಯಕ್ಷರಾಗಿ ಮೂಕಚಂಡ ಪ್ರಸನ್ನ ಆಯ್ಕೆ

ಬಿಟ್ಟಂಗಾಲ ಗ್ರಾ. ಪಂ. ನೂತನ ಅಧ್ಯಕ್ಷರಾಗಿ ಮೂಕಚಂಡ ಪ್ರಸನ್ನ ಆಯ್ಕೆ

ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಮೂಕಚಂಡ ಪ್ರಸನ್ನ ಸುಬ್ಬಯ್ಯ ಅವರು ಚುನಾವಣೆ ಮೂಲಕ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಎಚ್. ಜಿ. ಸರಸು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರದಂದು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾ. ಪಂ. ಸದಸ್ಯರ ಬಹುಮತದ ಆಯ್ಕೆಯ ಪ್ರಕಾರ ಅಧ್ಯಕ್ಷರಾಗಿ ಪ್ರಸನ್ನ ಸುಬ್ಬಯ್ಯ ಮತ್ತು ಉಪಾಧ್ಯಕ್ಷರಾಗಿ ಸರಸು ಅವರು ಅವಿರೋಧವಾಗಿ  ಜಯಗಳಿಸಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.

ಬಿಟ್ಟಂಗಾಲ ಗ್ರಾ. ಪಂ. ವ್ಯಾಪ್ತಿಯ ಕಂಡಂಗಾಲ ವಾರ್ಡಿನ ಸದಸ್ಯರಾಗಿ ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾಯಿತರಾಗಿದ್ದ ಪ್ರಸನ್ನ ಸುಬ್ಬಯ್ಯ ಅಧ್ಯಕ್ಷರಾಗಿ ಮತ್ತು ನಾಂಗಾಲ ವಾರ್ಡಿನ ಸದಸ್ಯರಾಗಿರುವ ಸರಸು ಅವರು ಉಪಾಧ್ಯಕ್ಷರಾಗಿ ಮುಂದಿನ ಎರಡೂವರೆ  ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. 

ಗ್ರಾ. ಪಂ. ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಸನ್ನ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇಡೀ ಜಿಲ್ಲೆಯಲ್ಲೇ ಉತ್ತಮ ಹೆಸರು ಗಳಿಸಿರುವ ಬಿಟ್ಟಂಗಲ ಗ್ರಾಮ ಪಂಚಾಯಿತಿಯನ್ನು ಮತ್ತಷ್ಟು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಪಕ್ಷಾಧಾರಿತವಾದ ರಾಜಕಾರಣ ಮಾಡದೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗ್ರಾ. ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಕಾಂಕ್ಷೆ ಹೊಂದಿದ್ದು, ವ್ಯವಸ್ಥಿತವಾದ ಕಾರ್ಯ ಯೋಜನೆಗಳನ್ನು ರೂಪಿಸಿ ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಅಧಿಕಾರಿ ಲವೀನಾ ಮಾದಪ್ಪ  ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಳಿಕ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾದ ನೆಲ್ಲಿರ ಚಲನ್, ವಿರಾಜಪೇಟೆ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಅಜ್ಜಿಕುಟ್ಟಿರ ಪ್ರವೀಣ್,  ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಬಿಟ್ಟಂಗಾಲ ಗ್ರಾ. ಪಂ. ಬಿಜೆಪಿ ಉಸ್ತುವಾರಿ ಪುಲಿಯಂಡ ಪೊನ್ನಣ್ಣ,  ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಅಪ್ಪಂಡೇರಂಡ ದಿನು, ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ, ಬಿಟ್ಟಂಗಾಲ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ  ಮಚ್ಚಾರಂಡ ಪ್ರವೀಣ್, ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷ ಸೀತಮ್ಮ, ಕಂಡಂಗಾಲ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ಮೇಚಿಯಂಡ ಅಪ್ಪುಟ್ಟ, ಕಾರ್ಯದರ್ಶಿ ಪಾತಂಡ ಸಂತೋಷ್, ವಿ. ಬಾಡಗ ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ಬಿಜೆಪಿ ಪ್ರಮುಖರಾದ ಅಮ್ಮುಣಿಚಂಡ ರೋಹಿತ್, ಅಮ್ಮೆಕಂಡ ಸುಬ್ರಮಣಿ, ಕೋಲತಂಡ ಸುಬ್ರಮಣಿ, ಪಕ್ಷದ ಪ್ರಮುಖರು ಸೇರಿದಂತೆ ಸ್ಥಳೀಯ ಗ್ರಾ.ಪಂ. ಸದಸ್ಯರು ಪಾಲ್ಗೊಂಡಿದ್ದರು.