ಬಲ್ಯಮುಂಡೂರು ಗ್ರಾಮ ಪಂಚಾಯಿತಿ: ಅಧ್ಯಕ್ಷರಾಗಿ ಶ್ರೀಮತಿ ದೇಯಂಡ ಪಿ.ದಮಯಂತಿ ಹಾಗು ಉಪಾಧ್ಯಕ್ಷರಾಗಿ ಅಲೆಮಾಡ ನವೀನ್ ಅವಿರೋಧವಾಗಿ ಆಯ್ಕೆ
ಬಲ್ಯಮುಂಡೂರು ಗ್ರಾಮ ಪಂಚಾಯಿತಿಗೆ ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಲ್ಯಮುಂಡೂರು ಗ್ರಾಮದ ಸದಸ್ಯರಾದ ಶ್ರೀಮತಿ ದೇಯಂಡ ಪಿ.ದಮಯಂತಿ ಯವರು ಅಧ್ಯಕ್ಷರಾಗಿಯೂ ಹಾಗು ಮುಗುಟಗೇರಿ ಗ್ರಾಮದ ಸದಸ್ಯರಾದ ಶ್ರೀ ಅಲೆಮಾಡ ನವೀನ್ ರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಬಲ್ಯಮುಂಡೂರು ಶಕ್ತಿ ಕೇಂದ್ರದ ಪ್ರಮುಖರಾದ ಶ್ರೀ ಕೊಟ್ಟಂಗಡ ಪ್ರಕಾಶ್, ಸಹ ಪ್ರಮುಖರಾದ ಶ್ರೀ ಚೀರಂಡ ಕಂದ ಸುಬ್ಬಯ್ಯ, ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀ ಪೆಮ್ಮಂಡ ಭರತ್, ಶ್ರೀ ಕೊಟ್ಟಂಗಡ ಅಯ್ಯಪ್ಪ, ಶ್ರೀಮತಿ ಮುದ್ದಿಯಡ ಶೀಲಾ, ಶ್ರೀಮತಿ ಕೆಂಬಿ, ಹಾಲಿ ಅಧ್ಯಕ್ಷರಾದ ಶ್ರೀಮತಿ ಶೈಲಾ, ಉಪಾಧ್ಯಕ್ಷರಾದ ಸುಮಿತ್ರಾ, ಚೀರಂಡ ಚಂಗಪ್ಪ, ಮುದ್ದಿಯಡ ನಿತಿನ್, ಮುದ್ದಿಯಡ ಕಿರಣ್, ಮಲಚಿರ ಪುಟ್ಟು ಹಾಗು ಮುದ್ದಿಯಡ ಮಂಜು ಗಣಪತಿ ಹಾಜರಿದ್ದರು, ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಮೂಕಳೆರ ದೀನ ಕುಶಾಲಪ್ಪ ಕಾರ್ಯ ನಿರ್ವಹಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network