Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಡಪಾಲ ಪೊಯಾಪಳ್ಳಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಎಡಪಾಲ  ಪೊಯಾಪಳ್ಳಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಚೆಯ್ಯ0ಡಾಣೆ: ಎಡಪಾಲ ಪೊಯಾಪಳ್ಳಿ ಜುಮಾ ಮಸೀದಿ ಹಾಗೂ ನಜ್ಮುಲ್ ಹುದಾ ಮದರಸ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯದ ಬಗ್ಗೆ  ದೇಶಭಕ್ತಿ ಗೀತೆ, ಭಾಷಣ,ನಾಡ ಗೀತೆ ಕಾರ್ಯಕ್ರಮ ನಡೆಯಿತು. ಮಸೀದಿಯ ಉಪಾಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್ ದಿನದ ಮಹತ್ವದ ಬಗ್ಗೆ ಹಿತ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮದರಸ ಅಧ್ಯಾಪಕರುಗಳಾದ ಅಬ್ದುಲ್ ಖಾದರ್ ಬಾಖವಿ, ಅಬ್ದುಲ್ ನಾಸಿರ್ ಪೈಝಿ, ಮಜೀದ್ ಮುಸ್ಲಿಯಾರ್,ಅಬ್ದುಲ್ಲ ಸಅದಿ,ಕಾರ್ಯದರ್ಶಿ ಶಾಹುಲ್ ಹಮೀದ್, ಇಬ್ರಾಹಿಂ, ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್, ನಜ್ಮುಲ್ ಹುದಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಂಸುದ್ದೀನ್, ಕೆ.ಎ.ರಶೀದ್, ಶುಕೂರ್ ಮದ್ರಸಾ ವಿದ್ಯಾರ್ಥಿಗಳು, ಹಾಗೂ ಗ್ರಾಮಸ್ಥರು ಇದ್ದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ