Header Ads Widget

ಸರ್ಚ್ ಕೂರ್ಗ್ ಮೀಡಿಯ

ಸ್ವಾತಂತ್ರ್ಯ ಹೋರಾಟಕಾರ ಪೋಡಮಾಡ ಕೆ. ಪೊನ್ನಪ್ಪ ನಿಧನಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂತಾಪ

ಸ್ವಾತಂತ್ರ್ಯ ಹೋರಾಟಕಾರ ಪೋಡಮಾಡ ಕೆ. ಪೊನ್ನಪ್ಪ ನಿಧನಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂತಾಪ

ಹಿರಿಯ ಸ್ವಾತಂತ್ರ ಹೋರಾಟಗಾರರಾಗಿದ್ದ ಪೋಡಮಾಡ ಕೆ ಪೊನ್ನಪ್ಪ ಅವರು ತಮ್ಮ 97ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಹಿರಿಯ ಚೇತನದ ಅಗಲಿಕೆಗೆ ಕೊಡವಾಮೆರ ಕೊಂಡಾಟ ಸಂಘಟನೆಯು ತೀವ್ರ  ಸಂತಾಪ ವ್ಯಕ್ತ ಪಡಿಸಿದೆ. 

ಭಾರತ ಸ್ವಾತಂತ್ರ ಚಳುವಳಿಯಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀಯುತ ಪೊನ್ನಪ್ಪ ಅವರು ದೇಶದ ಸ್ವಾತಂತ್ರ ದಿನದಂದೇ ಇಹಲೋಕ ತ್ಯಜಿಸಿರುವುದು ವಿಶೇಷ. ಕೊಡವಾಮೆರ ಕೊಂಡಾಟ ಸಂಘಟನೆ 2022ರಲ್ಲಿ ಆಯೋಜಿಸಿದ್ದ 262ಕ್ಕೂ ಅಧಿಕ ಕೊಡವ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಸಂಬಂಧಿಕರ ಸನ್ಮಾನ ಕಾರ್ಯಕ್ರಮದಲ್ಲಿ ಪೋಡಮಾಡ ಪೊನ್ನಪ್ಪ ಅವರು ಕುದ್ದು ಹಾಜರಿದ್ದು ಸನ್ಮಾನ ಪಡೆದರಲ್ಲದೆ, ತಮ್ಮ ಹೋರಾಟದ ಅನುಭವವನ್ನು ಹಂಚಿಕೊಂಡಿದ್ದರು. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂಘಟನೆ ತನ್ನ ವಾಟ್ಸಾಪ್  ಗುಂಪಿನ ಎಲ್ಲಾ ದೈನಂದಿನ ಕಾರ್ಯಕ್ರಮಗಳನ್ನು ನಿಲ್ಲಿಸುವ ಮೂಲಕ ಪ್ರಾರ್ಥಿಸಿದೆ.