ಕಡಂಗದಲ್ಲಿ ಗ್ಲೋರಿಯಸ್ ಇಂಡಿಯಾ ವಿಚಾರ ಗೋಷ್ಠಿ
ಚೆಯ್ಯಂಡಾಣೆ, ಆ 15: ಕಡಂಗ ಬದ್ರಿಯಾ ಮದ್ರಸದಲ್ಲಿ ಎಸ್ ವೈ ಎಸ್ ವಿರಾಜಪೇಟೆ ಝೋನ್ ವತಿಯಿಂದ "ಗ್ಲೋರಿಯಸ್ ಇಂಡಿಯಾ"ಎಂಬ ವಿಷಯದ ಬಗ್ಗೆ ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ವಿರಾಜಪೇಟೆ ಝೋನ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಗೋಣಿಕೊಪ್ಪ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಗುಂಡಿಗೆರೆ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಸ್ಥಳೀಯ ಬದ್ರಿಯಾ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ಹಾಗೂ ಆಲಿ ಮುಸ್ಲಿಯಾರ್ ಶುಭ ಹಾರೈಸಿ ಮಾತನಾಡಿದರು.
ಎಸ್ ವೈ ಎಸ್ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಗೋಷ್ಠಿಯಲ್ಲಿ ತರಗತಿಗೆ ನೇತೃತ್ವ ವಹಿಸಿ ಮಾತನಾಡಿ ಸ್ವಾತಂತ್ರ್ಯೋತ್ಸವಕ್ಕೆ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಪರಿಚಯಿಸಿ ಅವರು ಯಾವ ರೀತಿಯಲ್ಲಿ ತ್ಯಾಗವನ್ನು ನಮ್ಮ ಭಾರತ ದೇಶಕ್ಕಾಗಿ ಮಾಡಿದ್ದಾರೆ ಎಂಬುವುದರ ಬಗ್ಗೆ ಸವಿಸ್ತಾರವಾಗಿ ನೆರೆದಿದ್ದವರಿಗೆ ವಿವರಿಸಿದರು.
ಈ ಸಂದರ್ಭ ಬದ್ರಿಯಾ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಅರಫಾ, ಎಸ್ ವೈ ಎಸ್ ಪೊನ್ನ0ಪೇಟೆ ಸರ್ಕಲ್ ಅಧ್ಯಕ್ಷ ಹನೀಫಾ ಸಖಾಫಿ ಹಳ್ಳಿಗಟ್ಟು,ಕಡಂಗ ಎಸ್ ವೈ ಎಸ್ ಅಧ್ಯಕ್ಷ ಅಶ್ರಫ್, ಎಸ್ ವೈ ಎಸ್ ಕಡಂಗ ಸರ್ಕಲ್ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ ಎಡಪಾಲ ಹಾಗೂ ಎಸ್ ವೈ ಎಸ್, ಮುಸ್ಲಿಂ ಜಮಾಅತ್, ಎಸ್ ಎಸ್ ಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ವಾಗತ ಹಾಗೂ ವಂದನೆಯನ್ನು ವಿರಾಜಪೇಟೆ ಝೋನ್ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ನಝೀರ್ ನಿಝಾಮಿ ಗೋಣೆಕೊಪ್ಪ ನಿರ್ವಹಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network