Header Ads Widget

ಸರ್ಚ್ ಕೂರ್ಗ್ ಮೀಡಿಯ

ನಿವೃತ್ತ ಇಎಂಇ ಜಲಂದರ್ ಹಾಕಿ ಕ್ರೀಡಾಪಟುಗಳ ಸಂತೋಷಕೂಟ

ನಿವೃತ್ತ ಇಎಂಇ ಜಲಂದರ್ ಹಾಕಿ ಕ್ರೀಡಾಪಟುಗಳ ಸಂತೋಷಕೂಟ

ಮಡಿಕೇರಿಯಲ್ಲಿ ನಿವೃತ್ತ ಇಎಂಇ ಜಲಂದರ್ ಹಾಕಿ ಕ್ರೀಡಾ ಪಟುಗಳ ಸಂತೋಷ ಕೂಟ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ತಂಡವನ್ನು ಪ್ರತಿನಿದಿಸಿದ್ದ ನಿವೃತ್ತ ಕೊಡಂದೇರ ಕುಶ ನಂಜಪ್ಪನವರು ವಹಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಸೈನಿಕ ಪೋರೇರ ನಾಣಯ್ಯ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಆಟೋಟ ಸ್ವರ್ದೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಚೋಳಂಡ ಡಾಲು ಮುದ್ದಯ್ಯ, ನೆಲ್ಲಮಕ್ಕಡ ಕಾರ್ಯಪ್ಪ, ಪುಗ್ಗೆರ ತಿಮ್ಮಯ್ಯ, ಕ್ಯಾಲೇಟಿರ ಸೋಮಣ್ಣ, ಮಾದಂಡ ರವಿ ಪೆಮ್ಮಯ್ಯ, ಚೈಯಂಡ ಲವ ಅಪ್ಪಚ್ಚು, ಬೊಳ್ತಾಜ್ಜಿರ ಅಶೋಕ್, ಮಾರ್ಚಂಡ ಪ್ರಭು, ಅರೆಯಡ ಚಿಣ್ಣಪ್ಪ, ಚಂದಪ್ಪಂಡ ಆಕಾಶ್, ಅಲ್ಲಂಡ ವಾಸು ಮಾಚಯ್ಯ, ನೇರವಂಡ ಮದು ಪೂಣಚ್ಚ, ಚೇಮಿರ ಬೆಳ್ಯಪ್ಪ ಹಾಗೂ ಸರ್ವ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಚೈಯಂಡ ದೀಪಿಕಾ ಅಪ್ಪಚ್ಚು,ಸ್ವಾಗತವನ್ನು ಐತಿಚಂಡ ಕಾಶಿ ನಂಜಪ್ಪ ಹಾಗೂ ವಂದನೆಯನ್ನು ನೆಲ್ಲಮಕ್ಕಡ ಕಾರ್ಯಪ್ಪ ನಿರ್ವಹಿಸಿದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ