Header Ads Widget

Responsive Advertisement

ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮಿಲಾ ಸಂಘಟನೆ ವತಿಯಿಂದ ಸ್ವಚ್ಛತ್ತಾ ಕಾರ್ಯಕ್ರಮ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮಿಲಾ ಸಂಘಟನೆ ವತಿಯಿಂದ ಸ್ವಚ್ಛತ್ತಾ ಕಾರ್ಯಕ್ರಮ

ಚೆಯ್ಯಂಡಾಣೆ, ಜು 13: ಕೊಡಗು ಜಿಲ್ಲಾ ಆಮಿಲಾ ಸಮಿತಿಯ ಅಧ್ಯಕ್ಷ ಹ್ಯಾರಿಸ್ ನೇತೃತ್ವದಲ್ಲಿ ಕಾಕೋಟುಪರಂಬು ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಪಟ್ಟಣದಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಛತ್ತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಛತ್ತಾ ಕಾರ್ಯಕ್ರಮವು ವಿಜಯ ಪ್ರೌಢ ಶಾಲೆಯಿಂದ ಆರಂಭ ಗೊಂಡು ಪಟ್ಟಣದ ಕೆಡಿಸಿಸಿ ಬ್ಯಾಂಕ್ ನ ವರೆಗೆ ರಸ್ತೆಯ ಬದಿಗಳಲ್ಲಿದ್ದ ಕಸ,ಕಡ್ಡಿ, ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲ್ ಹಾಗೂ ರಸ್ತೆಯ ಬದಿಯಲ್ಲಿದ್ದ ಕಾಡುಗಳನ್ನು ಕಡಿದು ಸ್ವಚ್ಛ ಗೊಳಿಸಲಾಯಿತು. ಸುಮಾರು 5 ಕ್ಕೂ ಹೆಚ್ಚು ಟ್ರಾಕ್ಟರ್ ನಲ್ಲಿ ಕಸವನ್ನು ತುಂಬಿಸಿ ವಿಲೇವಾರಿ ಮಾಡಲಾಯಿತು.

ನಿರ್ಲಕ್ಷ ವಹಿಸುತ್ತಿರುವ ಕಾಕೋಟುಪರಂಬು ಗ್ರಾಮಪಂಚಾಯಿತಿ: ಗ್ರಾಮಸ್ಥರ  ಅಳಲು

ಕಾಕೋಟುಪರಂಬು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಡಂಗ ಮುರೂರು ಗ್ರಾಮಕ್ಕೆ ಒಳಪಟ್ಟ ಕಡಂಗ ಪಟ್ಟಣದ ವಿಜಯ ಪ್ರೌಢ ಶಾಲೆಯ ಸಮೀಪ ಹಾಗೂ ಮಸೀದಿಯ ಸಮೀಪ ಸ್ಥಳೀಯರು ಕಸವನ್ನು ತಂದು ಸುರಿಯುತ್ತಿದ್ದು ಗ್ರಾಮ ಪಂಚಾಯಿತಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವ್ಯಕ್ತಪಡಿಸಿದ್ದಾರೆ.

ಪ್ರೌಢ ಶಾಲೆಯ ಸಮೀಪದಲ್ಲೇ ಇರುವ ಬಸ್ ತಂಗುದಾಣದಲ್ಲಿ ಮದ್ಯ ಕುಡಿದು ಬಾಟಲಿಗಳನ್ನು ಅಲ್ಲೇ ಹಾಕಿದ್ದಾರೆ ಇದರಿಂದ ನಿತ್ಯ ಬಸ್ ಗಾಗಿ ತಂಗುದಾಣದಲ್ಲಿ ಕಾಯುವ ವಿದ್ಯಾರ್ಥಿಗಳು ಗೋಳು ಹೇಳತಿರದು, ಕೂಡಲೇ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲಾ ಆಮಿಲಾ ಅಧ್ಯಕ್ಷ ಹಾರಿಸ್ ಶುಚಿತ್ವದ ನೇತೃತ್ವ ವಹಿಸಿ ಮಾತನಾಡಿ ಸ್ವಾತಂತ್ರೋತ್ಸವದ ಅಂಗವಾಗಿ ಈ  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಡಂಗದಲ್ಲಿರುವ ಎರಡು ಜಮಾಅತ್ ನ ಪದಾಧಿಕಾರಿಗಳು, ಎಸ್ ಎಸ್ ಎಫ್, ಎಸ್ ಕೆ ಎಸ್ ಎಸ್ ಎಫ್ ಇದರ ಕಾರ್ಯಕರ್ತರು, ಗ್ರಾಮಸ್ಥರು, ಈ ಸಂದರ್ಭದಲ್ಲಿ ಕೈಜೋಡಿಸಿದರು. ಇನ್ನು ಕೂಡ ಈ ರೀತಿ ಹಲವಾರು ಕಾರ್ಯಕ್ರಮವನ್ನು ಸಂಘಟನೆ ವತಿಯಿಂದ ನಡೆಸಲಾಗುವುದು ಇದಕ್ಕೆಲ್ಲ ತಮ್ಮ ಸಹಕಾರ ಮುಖ್ಯ ಎಂದರು.

ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಮಾತನಾಡಿ ಸಂಘಟನೆ ಹಲವಾರು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಈ ದಿನ ಪಟ್ಟಣವನ್ನು ಸ್ವಚ್ಛ ಗೊಳಿಸಿದ್ದಾರೆ. ಇನ್ನು ಕೂಡ ಹಲವಾರು ಕಾರ್ಯಕ್ರಮ ಆಯೋಜಿಸವಂತಾಗಲಿಯೆಂದು ಶುಭಹಾರೈಸಿದರು. ಈ  ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಧನ್ಯವಾದ ಸಲ್ಲಿಸಿದರು.

ಬದ್ರಿಯಾ ಸುನ್ನೀ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ರಾಶಿದ್ ಮಾತನಾಡಿ ಇವತ್ತಿನ ಅಮಿಲಾ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ ಮೇರೆಗೆ  ನಮ್ಮ ಎಸ್ ಎಸ್ ಎಫ್ ಹಾಗೂ ಬದ್ರಿಯಾ ಮಸೀದಿಯ ಕಾರ್ಯಕರ್ತರು ಸಹಕರಿಸಿದ್ದಾರೆ ಇಂತಹ ಉತ್ತಮ ಕಾರ್ಯಕ್ರಮ ನಡೆಸುವ ಸಂಘಟನೆಗಳಿಗೆ ಸದಾ ನಮ್ಮ ಬೆಂಬಲವಿದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭ ಮೊಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಅರಫಾ, ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿಯ ಅಧ್ಯಕ್ಷ ಜುನೈದ್ ಸಿ.ಎ., ಪತ್ರಕರ್ತ ಹಾಗೂ ಎಸ್ ವೈ ಎಸ್ ಸಂಘಟನೆಯ ಕಡಂಗ ಅಧ್ಯಕ್ಷ ಅಶ್ರಫ್ ಸಿ.ಎ., ಎಸ್ ಕೆ ಎಸ್ ಎಸ್ ಎಫ್, ಎಸ್ ಎಸ್ ಎಫ್, ಕೆ.ಡಿ.ಎಸ್ ಮುಸ್ಲಿಂ ಯೂತ್ ಚಾರಿಟಿ ಹಾಗೂ ಮೊಯದ್ದೀನ್ ಜುಮಾ ಮಸೀದಿ, ಬದ್ರಿಯಾ ಸುನ್ನೀ ಮಸೀದಿಯ ಪದಾಧಿಕಾರಿಗಳು, ಗ್ರಾಮಸ್ಥರು, ಮತಿತ್ತರರು ಉಪಸ್ಥಿತರಿದ್ದರು.