Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಡಪಾಲ ಅಂಡತ್ ಮಾನಿ ದರ್ಗಾ ಶರೀಫ್: ಮಖಾಂ ಉರೂಸ್

ಎಡಪಾಲ ಅಂಡತ್ ಮಾನಿ ದರ್ಗಾ ಶರೀಫ್: ಮಖಾಂ ಉರೂಸ್

ಇತಿಹಾಸ ಹಿನ್ನಲೆ:

ಮಹ್ಮದ್‍ಪೈಗಂಬರರು ಇಸ್ಲಾಂ ಧರ್ಮವನ್ನು ಸ್ಥಾಪಿಸಿದ ನಂತರ ಧರ್ಮಪ್ರಚಾರಕ್ಕಾಗಿ ಜಗತ್ತಿನ ಹಲವು ದೇಶಗಳ ಕಡೆ ಧರ್ಮ ಪ್ರಚಾರಕರನ್ನು ಕಳುಹಿಸುತ್ತಾರೆ. ಸಾಮಾನ್ಯ ಶಕ 7ನೇ ಶತಮಾನದ ಅಂತ್ಯ ಹಾಗೂ 8ನೇ ಶತಮಾನದ ಆದಿಯಲ್ಲಿ ಭರತಖಂಡದ ಕಡೆ ತಮ್ಮ ಪ್ರಚಾರದ ಪ್ರಯಾಣವನ್ನು ಆರಂಭಿಸುತ್ತಾರೆ. ಆ ಕಾಲಘಟ್ಟದಲ್ಲಿ ಅಂದರೆ 1300ವರ್ಷಗಳ ಹಿಂದೆ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಪ್ರಕೃತಿ ರಮಣೀಯ ತಾಣವಾಗಿದ್ದ ಕೊಡಗಿಗೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಸೂಫಿ ಸಂತರು (ಸೂಫಿ ಸಂತರು: ಸೂಫಿ ಎಂದರೆ ಪರಿಶುದ್ಧ ಎಂದರ್ಥ. ಮಧ್ಯಕಾಲಿನ ಭಾರತದಲ್ಲಿ ಇಸ್ಲಾಂ ಧರ್ಮದ ಮೇಲೆ ಹಿಂದೂ ಧರ್ಮದ ಪ್ರಭಾವದ ಪರಿಣಾಮವಾಗಿ ಸೂಫಿ ಪಂಥ ಉದಯಿಸಿತು. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅನೇಕ ಆಚರಣೆಗಳನ್ನು ಅಳವಡಿಸಿಕೊಂಡಿತು. ಹಿಂದೂ ಸಂತರಂತೆ ಸೂಫಿ ಸಂತರು ಕೂಡ ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಧಾರ್ಮಿಕ ಸಾಮರಸ್ಯ, ಭಕ್ತಿ ಮುಂತಾದವುಗಳನ್ನು ಬೋಧಿಸಿದರು. ಇದರಿಂದಾಗಿಯೇ ಅನೇಕ ಹಿಂದೂ ಮತ್ತು ಮುಸಲ್ಮಾನರು ಸೂಫಿಗಳ ಶಿಷ್ಯರಾದರು.)

ತಮ್ಮ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಗಳಿಗಾಗಿ ಬಂದು ಕೊಡಗಿನ ಹಲವಾರು ಭಾಗಗಳಲ್ಲಿ ನೆಲೆ ನಿಲ್ಲುತ್ತಾರೆ. ಅವರಲ್ಲಿ ಬಹುಪಾಲು ಸೂಫಿ ಸಂತರು ತಲಕಾವೇರಿ, ಭಾಗಮಂಡಲ, ಕಕ್ಕಬ್ಬೆ, ಕೊಳಕೇರಿ, ನಾಪೋಕ್ಲು, ಕುಂಜಿಲ, ಗುಂಡಿಗೆರೆ, ಬಲಮುರಿ, ಪಾಲಿಬೆಟ್ಟ, ಎಡಪಾಲ ಮುಂತಾದೆಡೆ ಧ್ಯಾನಾಶಕ್ತರಾಗಿ ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಮಗ್ನರಾಗುತ್ತಾರೆ. ಅಂತಹ ಆಧ್ಯಾತ್ಮಿಕ ಸಾಧಕರಲ್ಲಿ ತಮ್ಮ ಹೆಸರನ್ನು ಎಂದಿಗೂ ಹೇಳಲಿಚ್ಚಿಸದ ಒಬ್ಬ ಸೂಫಿ ಸಂತ ಎಡಪಾಲ ಅಂಡತ್‌ ಮಾನಿ ದರ್ಗಾಷರೀಫದಲ್ಲಿ ಸಮಾಧಿಯಾಗಿರುವುದು ಎಂದು ಸ್ಥಳೀಯರ ನಂಬಿಕೆ. ಆದ್ದರಿಂದ ಈ ದರ್ಗಾ ಶರೀಪ್‍ನನ್ನು ‘ಎಡಪಾಲ ಅಂಡತ್‌ ಮಾನಿ ದರ್ಗಾ ಷರೀಫ್’ ಎಂದೇ ಕರೆಯಲಾಗುತ್ತದೆ. ಈ ಎಡಪಾಲ ಅಂಡತ್‌ ಮಾನಿ‌ ದರ್ಗಾ ಶರೀಪ್ ಬೆಳಕಿಗೆ ಬಂದು ಅಂದಾಜು 300ವರ್ಷಗಳು ಆಗಿದೆ ಎಂದು ಸ್ಥಳೀಯ ದರ್ಗಾ ಉಸ್ತುವಾರಿಯ ಮುಖಂಡರು ಹೇಳುತ್ತಾರೆ.

ಎಡಪಾಲ ಅಂಡತ್‌ ಮಾನಿ‌  ದರ್ಗಾ ಶರೀಫ್ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ದರ್ಗಾ ಶರೀಫ್ ಇದಾಗಿದೆ. ಈ ದರ್ಗಾವು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಡಪಾಲ ಗ್ರಾಮದಲ್ಲಿದೆ. ಈ ದರ್ಗಾವು ಶ್ರದ್ಧಾ-ಭಕ್ತಿಯ ಕೇಂದ್ರವಾಗಿದ್ದು, ಮುಸ್ಲಿಂ ಭಾಂದವರಲ್ಲದೆ ಹಿಂದೂ, ಕ್ರೈಸ್ತ, ಮತ್ತು ಇತರ ಜನಾಂಗದವರೂ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾ ಬಂದಿರುತ್ತಾರೆ. ಈ ದರ್ಗಾದಲ್ಲಿ ಹಲವಾರು ಪವಾಡಗಳು ನಡೆಯುವ ಬಗ್ಗೆ ಇಲ್ಲಿನ ಸ್ಥಳೀಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಈ ದರ್ಗಾ ಷರೀಫ್‍ನ ಉಸ್ತುವಾರಿಯನ್ನು ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಸಮಿತಿಯು ವಹಿಸಿಕೊಂಡು ವರ್ಷಂಪ್ರತಿ ಎಡಪಾಲ ಅಂಡತ್‌ ಮಾನಿ‌ ಮುಖಾಂ ಊರೂಸನ್ನು 3 ದಿನಗಳ ಕಾಲ ಆಚರಿಸೊಕೊಂಡು ಬರುತ್ತಿದೆ.

2024ರ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಸಮಾರಂಭದ ವಿವರಗಳು:

ತಾ: 28 ರ ಭಾನುವಾರ ಸಂಜೆ 4.30 ಗಂಟೆಗೆ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಝಿಯಾರತ್ ಗೆ ಅಲ್ ಹಾಜ್ ಕೆ. ನಿಝರ್ ಫೈಝಿ ಮುದರಿಸ್ ಎಡಪಾಲ ನೇತೃತ್ವ ವಹಿಸಲಿದ್ದಾರೆ.

ನಂತರ 5 ಗಂಟೆಗೆ ತಕ್ಕ ಮುಖ್ಯಸ್ಥರಾದ ಕೆ.ವೈ.ಕುಂಜ್ಞಹಮದ್ ನೇತೃತ್ವದಲ್ಲಿ ಮಖಾಂ ಅಲಂಕಾರ ನಡೆಯಲಿದೆ. ರಾತ್ರಿ ಪ್ರಖ್ಯಾತ ವಾಗ್ಮಿ ರಾಫಿ ಅಹ್ಸನಿ ಕಾಂದಪುರಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ತಾ: 29 ರಂದು ಅಪರಾಹ್ನ 3.30 ಗಂಟೆಗೆ ಸನ್ಮಾನ,ದುಆ ಮಜ್ಲಿಸ್ ಹಾಗೂ ಸಾರ್ವಜನಿಕ ಸಮಾರಂಭ ನಡೆಯಲಿದ್ದು ಸಯ್ಯದ್ ರಶೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವ ವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕರಾದ ಮಂಥರ್ ಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕರ್ನಾಟಕ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಸೈನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಹಾಗೂ ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ರಾತ್ರಿ ಆಬಿದ್ ಹುದವಿ ತಚ್ಚಣ್ಣ ಧಾರ್ಮಿಕ ಮತ ಪ್ರವಚನ ನೀಡಲಿದ್ದಾರೆ.

ತಾ: 29 ರ ಸಂಜೆ 4.30 ಗಂಟೆಗೆ ಹಾಗೂ 30 ರ ರಾತ್ರಿ 10 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

ತಾ: 30 ರಂದು ರಾತ್ರಿ ಪ್ರಖ್ಯಾತ ವಾಗ್ಮಿ ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಉರೂಸ್ ಅಂಗವಾಗಿ ದಫ್ ಸ್ವರ್ಧೆ:

ತಾ: 29 ಸೋಮವಾರ ಹಾಗೂ 30ರ ಮಂಗಳವಾರ ವಿವಿಧ ಕಲಾ ತಂಡಗಳಿಂದ ದಫ್ ಸ್ವರ್ಧೆಕೂಡ ಆಯೋಜಿಸಲಾಗಿದ್ದು ಸ್ವರ್ಧೆಯಲ್ಲಿ ವಿಜೇತರಾದ ತಂಡಕ್ಕೆ ಬಹುಮಾನ ನೀಡಲಾಗುವುದು.

ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಪದಾದಿಕಾರಿಗಳು:

1. ಅಧ್ಯಕ್ಷರು: ಕೆ.ಯು. ಶಾಫಿ

2. ಉಪಾಧ್ಯಕ್ಷರು: ಕೆ.ಎ. ಅಬೂಬಕ್ಕರ್

3. ಕಾರ್ಯದರ್ಶಿ: ಕೆ.ಎಂ. ಶಾಹುಲ್‌ ಸಮೀದ್‌

4.ಸಹಕಾರ್ಯದರ್ಶಿ: ಕೆ.ವೈ. ಅಬ್ದುಲ್‌ ರೆಹಮಾನ್

5. ಕೋಷಾಧಿಕಾರಿ: ಎರಟೆಂಡ ಹನೀಫ್

6. ಸದಸ್ಯರು: ಸಿ.ಎಂ. ಕುಂಜ್ಞಬ್ದುಲ್ಲಾ 

7. ಸದಸ್ಯರು: ಸಿ.ಎ. ಶುಕ್ತು

8. ಸದಸ್ಯರು: ಸಿ.ಇ. ಮಮ್ಮುಂಞ