Header Ads Widget

Responsive Advertisement

ಅತೀ ವಿಜೃಂಭಣೆಯಿಂದ ‌ ನಡೆದ ಎಡಪಾಲ ಅಂಡತ್‌ಮಾನಿ ಮಖಾಂ ಉರೂಸ್

ಅತೀ ವಿಜೃಂಭಣೆಯಿಂದ ‌ ನಡೆದ ಎಡಪಾಲ ಅಂಡತ್‌ಮಾನಿ ಮಖಾಂ ಉರೂಸ್

ಚೆಯ್ಯಂಡಾಣೆ ಜ 30. ಇತಿಹಾಸ ಪ್ರಸಿದ್ಧ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ತಾ: 28ರಿಂದ ಆರಂಭ ಗೊಂಡಿದ್ದು 30ರ ವರೆಗೆ ಅತೀ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ 28 ರಂದು ಧ್ವಜಾರೋಹಣ ನೆರೆವೇರಿಸುವ  ಮೂಲಕ ಉರೂಸ್ ಗೆ ವಿದ್ಯುತ್ತವಾಗಿ ಚಾಲನೆ  ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಹಲವು ಪವಾಡಗಳಿಗೆ ಹೆಸರಾಗಿರುವ ಎಡಪಾಲ ಅಂಡತ್ ಮಾನಿ ದರ್ಗಾ ಷರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ  ಪವಾಡ ಪುರುಷರ ಹೆಸರಿನಲ್ಲಿ ವರ್ಷಪ್ರತಿ ನಡೆಸಿಕೊಂಡು ಬರುತ್ತಿರುವ  ಉರೂಸ್ ಸಮಾರಂಭದಲ್ಲಿ ಜಾತಿ ಮತ ಭೇದವಿಲ್ಲದೆ ಅಧಿಕ ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸಿದರು.

ಸಭಾ ಕಾರ್ಯಕ್ರಮ:

ಮುಖ್ಯ ಅತಿಥಿಯಾಗಿ ಎಡಪಾಲ ಜಮಾಅತ್ ಮಾಜಿ ಅಧ್ಯಕ್ಷ ಬಷೀರ್ ಮಾತನಾಡಿ ಉರೂಸ್ ಸಮಾರಂಭದಿಂದ ಪರಸ್ಪರ ಬಾಂದವ್ಯ,ಕುಟುಂಬ ಸಂಬಂಧ ವೃದ್ಧಿಸುತ್ತದೆ, ಎಲ್ಲರು ಒಟ್ಟಾಗಿ ಭಾಗವಹಿಸುವ ಮೂಲಕ ಸೌಹಾರ್ದತೆ ಉರೂಸ್ ಶಾಕ್ಷಿ ಯಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಯು.ಶಾಫಿ ನಾವೆಲ್ಲರೂ ಅಣ್ಣ ತಮ್ಮದಿಯರು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬಾಳಬೇಕು, ಕಚ್ಚಾಟದಿಂದ ಏನನ್ನು ಸಾದಿಸಲು ಸಾಧ್ಯವಿಲ್ಲ ದೇವರು ಆಶೀರ್ವದಿಸಿದರೆ ಮಾತ್ರ ಉನ್ನತಿಗೇರಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಜಿಲ ಮುದರಿಸ್ ನಿಝರ್ ಅಹ್ಸನಿ ಕಕ್ಕಡಿಪುರಂ ಅಂಡತ್ ಮಾನಿ ಮಖಾ0 ಇತಿಹಾಸ ಪ್ರಸಿದ್ಧವಾಗಿದೆ,ಹಲವಾರು ಕಷ್ಟ, ಕಾರ್ಪಣ್ಯಗಳಿಗೆ ಈ ದರ್ಗಾ ಷರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುವ ಮಹಾನರ ಸನ್ನಿದಿಯಲ್ಲಿ ಪರಿಹಾರ ವಾಗಿದ್ದು, ಜನ ಮನಸುಗಳನ್ನು ಅರಿತುಕೊಳ್ಳುವ ಶಕ್ತಿ ಮಹಾನ್ ನರಿಗಿದೆ ಎಂದವರು ಮಾತನಾಡಿದರು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಉದ್ಘಾಟಿಸಿ ಮಾತನಾಡಿ ಎಡಪಾಲ ಅಂಡತ್ ಮಾನಿ ದರ್ಗಾ ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯದ ನಾನಾ ಭಾಗದ ಹಾಗೂ ಕೇರಳದ ಹಲವಾರು ಜನರ ಮಾರಕ ರೋಗಗಳನ್ನು ಗುಣಪಡಿಸಿದ ಹಲವಾರು ಉದಾರಣೆಗಳನ್ನು ವಿವರಿಸಿ ಎಡಪಾಲ ಅಂಡತ್ ಮಾನಿ ದರ್ಗಾದ ಪುಣ್ಯ ಕಾರ್ಯವನ್ನು ಸ್ಮರಿಸಿದರು.

ರಾತ್ರಿ ಕೇರಳದ ಪ್ರಖ್ಯಾತ ವಾಗ್ಮಿ ಅಬಿದ್ ಹುದವಿ ತಚ್ಚಣ್ಣ ಧಾರ್ಮಿಕ ಮತಪ್ರವಚನಕ್ಕೆ ನೇತೃತ್ವ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಮುದರಿಸ್ ನಿಝರ್ ಫೈಝಿ ನೆರವೇರಿಸಿದರು,ಸ್ವಾಗತವನ್ನು ಜಮಾಅತ್ ಉಪಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ನಡೆಸಿದರೆ,ನಿರೂಪಣೆಯನ್ನು ಸಿನಾನ್ ಶರಫಿ,ಹಂಝ ಹಾಗೂ ಸಿದ್ದಿಕ್ ಮುಸ್ಲಿಯಾರ್ ನಿರ್ವಹಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಇ.ಮಮ್ಮದ್, ಸುಬೈರ್ ಸಿ.ಇ, ಅಬ್ದುಲ್ ರಝಕ್ ಫೈಝಿ,ಸದರ್ ಮುಹಲಿಮ್ ಹಮೀದ್ ಫೈಝಿ ಹಾಗೂ ವಿವಿಧ ಸಾಮಾಜಿಕ, ರಾಜಕೀಯ, ಉಲಮಾ ಉಮಾರ ನೇತಾರರು ಉಪಸ್ಥಿತರಿದ್ದರು.

ಸಂಜೆ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ವರದಿ: ಅಶ್ರಫ್ ಚೆಯ್ಯಂಡಾಣೆ