Header Ads Widget

Responsive Advertisement

ಹಳೇತಾಲೂಕು ಪ್ರೀಮಿಯರ್ ಲೀಗ್ ಕ್ರಿಕೆಟ್: ಕೂರ್ಗ್ ಅವೆಂಜರ್ಸ್ ಚಾಂಪಿಯನ್, ಕಳತ್ತಿಲ್ ಬಾಯ್ಸ್ ರನ್ನರ್ಸ್

ಹಳೇತಾಲೂಕು ಪ್ರೀಮಿಯರ್ ಲೀಗ್ ಕ್ರಿಕೆಟ್: ಕೂರ್ಗ್ ಅವೆಂಜರ್ಸ್   ಚಾಂಪಿಯನ್, ಕಳತ್ತಿಲ್ ಬಾಯ್ಸ್ ರನ್ನರ್ಸ್

ನಾಪೋಕ್ಲು:ನಾಪೋಕ್ಲು ಬಳಿಯ ಹಳೇತಾಲೂಕಿನ ಅಲ್ ಅಮೀನ್ ಕ್ರಿಕೆಟರ್ಸ್ ವತಿಯಿಂದ  ಆಯೋಜಿಸಲಾದ 5ನೇ ವರ್ಷದ ಹಳೇತಾಲೂಕು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೂರ್ಗ್ ಅವೆಂಜರ್ಸ್  ತಂಡ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ.

ನಾಪೋಕ್ಲುವಿನ  ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ  ಆಕರ್ಷಕ  ಫೈನಲ್ ಪಂದ್ಯಾಟದಲ್ಲಿ ಸಾಬಿತ್ ಮಾಲಿಕತ್ವದ ಕಳತ್ತಿಲ್ ಬಾಯ್ಸ್  ತಂಡವನ್ನು ಮಣಿಸಿ ಸುನಿಲ್ ಮಾಲಿಕತ್ವದ ಕೂರ್ಗ್ ಅವೆಂಜರ್ಸ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕಳತ್ತಿಲ್ ಬಾಯ್ಸ್  ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕಳೆದ ಎರಡು ದಿನಗಳಿಂದ ನಡೆದ ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು.

ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ವಂಶಿ ಕ್ರಿಕೆಟರ್ಸ್ ತಂಡದ ಜೀವನ್ ಪಡೆದುಕೊಂಡರು. ಸರಣಿ ಪುರುಷೋತ್ತಮ  ಪ್ರಶಸ್ತಿಯನ್ನು ಕಳತ್ತಿಲ್ ಬಾಯ್ಸ್ ತಂಡದ ಸೋಮಯ್ಯ, ಉದಯೋನ್ಮುಖ ಆಟಗಾರನಾಗಿ ಟೀಮ್ ನೆಪೋಲಿಯನ್ ತಂಡದ ಚಂದನ್, ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ಕೂರ್ಗ್ ಅವೆಂಜರ್ಸ್ ತಂಡದ ಸುನಿಲ್,ಬೆಸ್ಟ್ ಕ್ಯಾಚ್  ಪ್ರಶಸ್ತಿಯನ್ನು ಕಳತ್ತಿಲ್ ತಂಡದ ಅಮೀರ್,ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಕೂರ್ಗ್ ಅವೆಂಜರ್ಸ್  ತಂಡದ ಜುನೈದ್, ಅತ್ಯುತ್ತಮ ಸಿಕ್ಸರ್ ಬಾರಿಸಿದ ಪ್ರಶಸ್ತಿಗೆ ಕಳತ್ತಿಲ್ ಬಾಯ್ಸ್ ತಂಡದ ಸೋಮಯ್ಯ, ಬೆಸ್ಟ್ ಬೌಲರ್ ಪ್ರಶಸ್ತಿಗೆ ಕಳತ್ತಿಲ್ ಬಾಯ್ಸ್ ತಂಡದ ಅಮೀರ್ ಭಾಜನರಾದರು.

ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಇರ್ಷಾದ್ ಮತ್ತು ರಿಯಾಜ್ ನೀಡಿದರು. ಪಂದ್ಯವಳಿಯ ತೀರ್ಪುಗಾರರಾಗಿ ರಾಶಿದ್ ಹಾಗೂ ಸೋಮಣ್ಣ ಕಾರ್ಯನಿರ್ವಹಿಸಿದರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಎ. ಮಹಮ್ಮದ್, ಬಿ.ಎಂ.ಪ್ರತೀಪ, ಕೇಲೇಟಿರ ಡಾ.ಬೋಪಣ್ಣ,ಬಿ. ಕೆ.ಮಹಮ್ಮದ್ ಅಲಿ,ಎಂ.ಎಸ್. ಇಬ್ರಾಹಿಂ,ಆಯೋಜಕರಾದ ರಿಜ್ವಾನ್, ಮುನೀರ್, ಆಸೀಫ್,ಅಝೀಝ್, ಪ್ರಮುಖರಾದ ಬಿ.ಎಂ.ಹಂಸ, ಟಿ.ಎ.ಇಬ್ರಾಹಿಂ,ಅಬ್ದುಲ್ ಖಾದರ್, ಶಮೀರ್,ರಫೀಕ್ ಸೇರಿದಂತೆ ಅಲ್ ಅಮೀನ್ ಕ್ರಿಕೆಟರ್ಸ್ ನ ಪದಾಧಿಕಾರಿಗಳು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳ ನಾಯಕರು,ಸದಸ್ಯರು ಮತ್ತಿತರ ಪ್ರಮುಖರು ಹಾಜರಿದ್ದರು.

ವರದಿ: ಝಕರಿಯ ನಾಪೋಕ್ಲು