ಚೆಯ್ಯಂಡಾಣೆಯಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಮಸ್ಯೆ: ಸಮಸ್ಯೆ ಪರಿಹರಿಸದಿದ್ದರೆ ಉಗ್ರಹೋರಾಟದ ಹೆಚ್ಚರಿಕೆ
ಚೆಯ್ಯಂಡಾಣೆ ಜ 3: ಗ್ರಾಮೀಣ ಜನರಿಗೆ ವರವಾಗಿದ್ದ ಬಿಎಸ್‌ಎನ್‌ಎಲ್ ದೂರವಾಣಿ ಸಂಸ್ಥೆ ಇದೀಗ ಶಾಪವಾಗಿ ಪರಿಣಮಿಸಿದೆ. ಬಿಎಸ್‌ಎನ್‌ಎಲ್ ಕಚೇರಿಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಡುತ್ತಿದ್ದು, ಟವರ್‌ಗಳು ಕೂಡ ನಿಷ್ಕ್ರಿಯಗೊಳ್ಳುತ್ತಿವೆ.ಚೆಯ್ಯಂಡಾಣೆಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಇದಕ್ಕೆ ಒಂದು ಉತ್ತಮ ಸಾಕ್ಷಿಯಾಗಿದೆ.
ಇಲ್ಲಿರುವ ಟವರ್ ನಲ್ಲಿ ಜನರೇಟರ್ ಕಾರ್ಯ ಸ್ಥಗಿತಗೊಳಿಸಿ ಹಲವು ದಿನಗಳೇ ಕಳೆದಿದೆ ಅನಿಸುತ್ತಿದೆ. ಇಲ್ಲಿ ಟವರ್, ಜನರೇಟರ್, ಸಿಬ್ಬಂದಿಗಳು ಎಲ್ಲವೂ ಮೂಕ ಪ್ರೇಕ್ಷಕರಂತೆ ನಿಂತಿವೆ. ಯಾವುದೇ ಸಿಬ್ಬಂದಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಸುತ್ತಮುತ್ತಲ ಗ್ರಾಮಸ್ಥರ ದೂರವಾಣಿ ಕಾರ್ಯನಿರ್ವಹಿಸದೆ ತಿಂಗಳುಗಳೇ ಕಳೆದಿದೆ. ಮೊಬೈಲ್ ಗಳಂತೂ ನೆಟ್ ವರ್ಕ್ ಸಿಗದೆ ನಿಷ್ಕ್ರಿಯವಾಗುತ್ತಿವೆ.
ಜನೋಪಕಾರಿ ಸಂಸ್ಥೆಯಾಗಿದ್ದ ಬಿಎಸ್‌ಎನ್‌ಎಲ್ ಈ ದುಸ್ಥಿತಿಗೆ ಬಂದು ತಲುಪಿರುವುದು ವಿಷಾದಕರವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೆಯ್ಯಂಡಾಣೆಯಲ್ಲಿ ಬಿ.ಎಸ್.ಎನ್.ಎಲ್. ಕಚೇರಿ ಇಲ್ಲ, ಟವರ್ ನ ನೆಟ್ ವರ್ಕ್ ಮೇಲೆ ಅವಲಂಬಿತರಾಗಿದ್ದ ಸುತ್ತಮುತ್ತಲಿನ ಜನ ಇದೀಗ ಯಾವುದೇ ಸಂಪರ್ಕವಿಲ್ಲದೆ ಗೊಂದಲಕ್ಕೆ ಸಿಲುಕಿದ್ದಾರೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಬಿ.ಎಸ್.ಎನ್.ಎಲ್. ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಗ್ರಾಮಸ್ಥರಾದ ಬೆಳಿಯಂಡ್ರ ಸುನಿಲ್, ಮುಂಡಿಯೋಳಂಡ ಶರಣು ದೇವಯ್ಯ, ಕುಟ್ಟನ ಶೀತಾರಾಮ್, ಬಾಚಮಂಡ ಲೋಕೇಶ್ ಒತ್ತಾಯಿಸಿದ್ದಾರೆ.
ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಜಿಲ್ಲೆಯ ಮುಖ್ಯ ಬಿ.ಎಸ್.ಎನ್.ಎಲ್. ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದೆಂದು ಒತ್ತಾಯಿಸಿದ್ದಾರೆ.
ವರದಿ: ಅಶ್ರಫ್ ಚೆಯ್ಯಂಡಾಣೆ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network