Header Ads Widget

Responsive Advertisement

ಫೆಬ್ರವರಿ 2ರಿಂದ ಕಡಂಗ ಕೊಕ್ಕಂಡ ಬಾಣೆ ಉರೂಸ್ ಕಾರ್ಯಕ್ರಮ

ಫೆಬ್ರವರಿ 2ರಿಂದ ಕಡಂಗ ಕೊಕ್ಕಂಡ ಬಾಣೆ ಉರೂಸ್ ಕಾರ್ಯಕ್ರಮ

ಕಡಂಗ: ಸಮೀಪದಲ್ಲಿರುವ ಕೊಕ್ಕಂಡ ಬಾಣೆ ದರ್ಗಾ ಶರೀಫ್ ನಲ್ಲಿರುವ ಮಹಾತ್ಮರ ಹೆಸರಿನಲ್ಲಿ ನಡೆಸಿರುವ ಇತಿಹಾಸ ಪ್ರಸಿದ್ಧವಾದ ಊರಸ್ ಕಾರ್ಯಕ್ರಮಕ್ಕೆ ಶುಕ್ರವಾರ(ಇಂದಿನಿಂದ) ಚಾಲನೆಗೊಳ್ಳಲಿದೆ ಎಂದು  ಮುಹ್ಯಯದ್ದೀನ್  ಜುಮ ಮಸೀದಿಯ ಅಧ್ಯಕ್ಷ ಅಬ್ದುಲ ರವರು ತಿಳಿಸಿದ್ದಾರೆ

ಐದು ದಿನಗಳ ಕಾಲ ನಡೆಯುವ ಊರುಸ್ ಕಾರ್ಯಕ್ರಮವು ಶುಕ್ರವಾರ ಜುಮಾ ನಮಾಜಿನ ಬಳಿಕ ಖತೀಬ್ ಉಸ್ತಾದರಾದ ರಫೀಕ್ ಲತಿಫಿರವರ ಪ್ರಾರ್ಥನೆ ಮೂಲಕ ಪ್ರಾರಂಭಗೊಳ್ಳಲಿದ್ದು  ರಾತ್ರಿ 8:00ಗೆ  ದುವಾ ಕಾರ್ಯಕ್ರಮವನ್ನು ಕೇರಳದ ಪ್ರಸಿದ್ಧ ಸೈಹಿದ್  ಕುಂಬೊಳ್ ಅಲಿ ರವರು ನೆರವೇರಿಸಲಿದ್ದಾರೆ

ಸೋಮವಾರ ಮತ್ತು ಮಂಗಳವಾರ ಸಾಯಂಕಾಲ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು

ಗೋಷ್ಠಿಯಲ್ಲಿ  ಉಪಾಧ್ಯಕ್ಷ ರಾದ ಸಲಾಂ ಸಿ ಎ,ಕಾರ್ಯದರ್ಶಿಗಳದ ಅಬ್ದುರ್ಹ್ಮಾನ್ ಹಾಗೂ ಜೊತೆ ಕಾರ್ಯದರ್ಶಿ, ಶಮೀರ್ ಪಿ ಎಚ್ ರವರು ಉಪಸ್ಥಿತರಿದ್ದರು.

ವರದಿ: ನೌಫಲ್ ಕಡಂಗ