Header Ads Widget

Responsive Advertisement

ಹುದೂರು ಬೋಡ್ ನಮ್ಮೆ ಮೇ-22 ಹಾಗೂ 23ರಂದು

ಪೊನ್ನಂಪೇಟೆ ಸಮೀಪದ ಹುದೂರು ಶ್ರೀ ಭಗವತಿ ಪಿಂಞ ಭದ್ರಕಾಳಿ ದೇವರ ವಾರ್ಷಿಕ ಬೇಡು ಹಬ್ಬ ಇದೇ 22ರಂದು ಬುಧವಾರ 23ರಂದು ಗುರುವಾರ ನಡೆಯಲಿದೆ ಎಂದು ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ವರ್ಷ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದು 22ರಂದು ಬುಧವಾರ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಹಾಗೂ 23ರಂದು ಗುರುವಾರ ಶ್ರೀ ಭಗವತಿ ದೇವಸ್ಥಾನದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು.

22ರಂದು ಬುಧವಾರ ಅಪರಾಹ್ನ 3-00ಗಂಟೆಗೆ ಶ್ರೀ ಭದ್ರಕಾಳಿ ದೇವರ ಕುದುರೆ ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಹೊರಟು ಹತ್ತಿರದ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ದೇವರಿಗೆ ಹರಕೆ, ಕಾಣಿಕೆ ಸಲ್ಲಿಸುವ ಮೂಲಕ ಮೊದಲ ದಿನದ ಹಬ್ಬ ನಡೆಯಲಿದ್ದು, 23ರಂದು ಗುರುವಾರ ಅಪರಾಹ್ನ 3-00 ಗಂಟೆಗೆ ಶ್ರೀ ಭಗವತಿ ದೇವರ ಕುದುರೆ ಅಂಬದಿಂದ ಹೊರಟು ಶ್ರೀ ಭಗವತಿ ದೇವಸ್ಥಾನದಲ್ಲಿ ಹರಕೆ ಕಾಣಿಕೆ ಸಲ್ಲಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.