Header Ads Widget

ಸರ್ಚ್ ಕೂರ್ಗ್ ಮೀಡಿಯ

ಅನಾಥ ಬುದ್ಧಿಮಾಂದ್ಯ ಹುಡುಗನನ್ನು ರಕ್ಷಣೆ ಮಾಡಿ ಅನಾಥಾಶ್ರಮಕ್ಕೆ ಸೇರಿಸಿದ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ನಗರದಲ್ಲಿ ಅನಾಥ ಬುದ್ಧಿಮಾಂದ್ಯ ಹುಡುಗ ರಸ್ತೆ ಉದ್ದಕ್ಕೂ ಸುತ್ತುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಸೋಮವಾರಪೇಟೆ ವೃತ್ತ ನಿರೀಕ್ಷಕರಿಗೆ ಫೋನ್ ಮುಖಾಂತರ ಸಂಪರ್ಕಿಸಿದಾಗ ಪೊಲೀಸ್ ಸಿಬ್ಬಂದಿಗಳು ಬಂದು ಈ ಹುಡುಗನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ  ಈ ಹುಡುಗನ ಹೆಸರು ಹೇಮಂತ್ ಇವರ ತಂದೆ ಹೆಸರು ಬೆಂಗಳೂರಿನ ಲಗ್ಗೆರೆ ನಿವಾಸಿ ವೆಂಕಟಪ್ಪ ಹಾಗೂ ಇವರ ತಾಯಿಯ ಹೆಸರು ಪವಿ ಎಂದು ತಿಳಿದು ಬಂದಿದೆ ನಂತರ ಪೊಲೀಸ್ ಸಮ್ಮುಖದಲ್ಲಿ ಹುಡುಗನನ್ನು ಮಡಿಕೇರಿಯ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಲಾಗಿದೆ.

ಈ ಸಂದರ್ಭದಲ್ಲಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ವೃತ್ತ ನಿರೀಕ್ಷಕರಾದ ಪ್ರಹ್ಲಾದ್, ಕರ್ನಾಟಕ ಟ್ಯಾಕ್ಸಿ ಡ್ರೈವರ್ ಅಸೋಸಿಯಲ್ ಕಾರ್ಯದರ್ಶಿಗಳಾದ ಭರತ್ ಮಾದಪ್ಪ, ಪೊಲೀಸ್  ಸಿಬ್ಬಂದಿಗಳು ಉಪಸ್ಥಿತರಿದ್ದರು.