ಮೂರ್ನಾಡು: ಕಾಂತೂರು ಗ್ರಾಮದ ಸ್ಥಳದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ತಾ. 30 ಮತ್ತ 31ರಂದು ನಡೆಯಲಿದೆ.
ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶಿಲಾ ವಿಗ್ರಹ ಪ್ರತಿಷ್ಠಾಪನೆಯು ಇರಿಟ್ಟಿಯ ನಾಗರಾಜ ಮಹೇಶ್ ಭಟ್ ಮತ್ತು ಗಣಪತಿ ಭಟ್ ಅವರ ನೇತೃತ್ವದಲ್ಲಿ ನಡೆಯಲಿದ್ದು ತಾ. 30ರಂದು ಬೆಳಗ್ಗೆ 10 ಗಂಟೆಗೆ ಮಹಾಸಂಕಲ್ಪ, ಗಣಪತಿ ಪೂಜೆ, ದೀಪಲಕ್ಷಿö ಪೂಜೆ, ಪುಣ್ಯಾಹವಾಚನ, ದೇವನಾಂದಿ, ಮಾತೃಕಾ ಪೂಜೆ, ರಕ್ಷಾಬಂಧನ, ಅಂಕುರಾರ್ಪಣೆ, ಬ್ರಹ್ಮಕೂರ್ಚಹವನ, ಮಧುಪರ್ಕಪೂಜೆ, ಅಷ್ಠಮೂರ್ತಿ ಪ್ರಾರ್ಥನೆ, ಸಂಜೆಯ ವೇಳೆಗೆ ಕಲಶ ಸ್ಥಾಪನೆ, ಮೂರ್ತಿ ಪರಿಗ್ರಹಣ, ದೇವಾಲಯ ಪರಿಗ್ರಹಣ, ಗಣಹೋಮ, ವಾಸ್ತುಹೋಮ, ರಾಕ್ಷೋಘ್ಣ ಹೋಮ, ಅಧಿವಾಸ ಹೋಮ ಪೂಜೆ, ಮಹಮಂಗಳಾರತಿ ಮತ್ತು ದಿಗ್ಭಲಿ ಪೂಜಾ ಕಾರ್ಯಕ್ರಮಗಳ ನಂತರ ಅನ್ನ ಸಂತರ್ಪಣೆ ನಡಯಲಿದೆ.
ತಾ. 30ರಂದು ಬೆಳಗ್ಗೆ 6-30 ಗಂಟೆಗೆ ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ರತ್ನನ್ಯಾಸ, ಪೀಠನ್ಯಾಸ ಹೋಮ, ಪಂಚಸೂಕ್ತ ಹೋಮ, ಪ್ರತಿಷ್ಠಾ ಹೋಮ, ಕಲಾಹವನಾದಿಗಳು, ಪೂರ್ಣಾಹುತಿ, ಕಲಶ ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಅಲಂಕಾರ ಸೇವೆ, ಮಹಾ ನೈವೇದ್ಯ, ರಾಷ್ಟ್ರಾಶಿರ್ವಾದ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಚಿತ್ರ ಮತ್ತು ವರದಿ: ಟಿ.ಸಿ. ನಾಗರಾಜ್, ಮೂರ್ನಾಡು
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network