Header Ads Widget

ಸರ್ಚ್ ಕೂರ್ಗ್ ಮೀಡಿಯ

ನಮ್ಮ ಗ್ರಾಮವನ್ನು ಇನ್ನಷ್ಟು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಹೆಜ್ಜೆಯಿಟ್ಟಿದ್ದೇನೆ; ಸುರೇಶ್‌ ಟಿ.ಬಿ

ಸುರೇಶ್‌ ಟಿ.ಬಿ, ಸದಸ್ಯರು: ಗ್ರಾ.ಪಂ. ಗರ್ವಾಲೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಗರ್ವಾಲೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್‌ ಟಿ.ಬಿ. ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಸುರೇಶ್‌ ಟಿ.ಬಿ. “ನಾನು ಜನಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣವೇನೆಂದರೆ ನಾನು ಈ ಮೊದಲು ರಾಷ್ರ್ಟೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದು, ಗ್ರಾಮದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯನಾಗಿದ್ದೆ, ನನ್ನ ಈ ಕಾರ್ಯವನ್ನು ಗಮನಿಸಿದ ಹಿರಿಯರು ಹಾಗೂ ಗ್ರಾಮಸ್ಥರ ಒತ್ತಾಸೆಯ ಮೇರೆಗೆ 2020 ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಶಿರಂಗಾಲ ಹಾಗೂ ಕಿರುದಾಲೆ ಗ್ರಾಮ ವ್ಯಾಪ್ತಿಯಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿ ಗರ್ವಾಲೆ ಗ್ರಾಮ ಪಂಚಾಯಿತಿಯ  ಸದಸ್ಯನಾಗಿ ಆಯ್ಕೆಯಾದೆ. 

ನಮ್ಮ ಗ್ರಾಮದ ಪ್ರಮುಖ ಸಮಸ್ಯೆಯೆಂದರೆ ಅದು ಕುಡಿಯುವ ನೀರಿನ ಸಮಸ್ಯೆ. ಅದರ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದೇನೆ, ಪ್ರಸ್ತುತ “ಜಲ್‌ ಜೀವನ್‌ ಮಿಷನ್‌” ಯೋಜನೆ ಅಡಿಯಲ್ಲಿ ಪ್ರತೀ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದ್ದು, 75% ಪೂರ್ಣವಾಗಿದೆ. ಉಳಿದ ಕಾಮಗಾರಿಗೆ ಅನುದಾನಕ್ಕಾಗಿ ಮನವಿ ನೀಡಲಾಗಿದೆ.  ಮಾದಾಪುರ - ನಂದಿಮೊಟ್ಟೆ ರಸ್ತೆ ಬದಿಯ ಚರಂಡಿ ಕಾಮಗಾರಿಗೆ ಜಿಲ್ಲಾ ಪಂಚಾಯಿತಿಗೆ ಮನವಿ ನೀಡಲಾಗಿದ್ದು, ಶೀಘ್ರದಲ್ಲೇ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

“ಸ್ಚಚ್ಛ ಭಾರತ್‌ ಮಿಷನ್” ಯೋಜನೆ ಅಡಿಯಲ್ಲಿ ಎಲ್ಲಾ ಮನೆಗಳಿಗೂ ಶೌಚಾಲಯ ವ್ಯವಸ್ಥೆ ಆಗಿದೆ. ಕಸ ವಿಲೇವಾರಿಗೆ ವಾಹನ ವ್ಯವಸ್ಥೆಯಿದ್ದು‌, ನಮ್ಮ ಪಂಚಾಯಿತಿಗೆ ತನ್ನದೆ ಆದ ಕಸ ವಿಲೇವಾರಿ ಘಟಕ ಇದೆ. 15ನೇ ಹಣಕಾಸಿನ ಯೋಜನೆಯ ಅನುದಾನವನ್ನು ಪೂರ್ಣವಾಗಿ ಉಪಯೋಗಿಸಿಲಾಗಿದೆ. 

ನಾನು ಆಯ್ಕೆಯಾದ ಗ್ರಾಮದ ಎಲ್ಲಾ ಮನೆಗಳಿಗೆ ಬೇಕಾದ ಎಲ್ಲಾ ರೀತಿಯ ಸರ್ಕಾರಿ ದಾಖಲಾತಿಗಳು, ಸರ್ಕಾರಿ ಯೋಜನೆಗಳಾದ ಪೆನ್ಶನ್‌, ಎಸ್.ಎಸ್‌.ಎಲ್.ಸಿ ಹಾಗೂ ಪಿ.ಯು.ಸಿ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಪಂಚಾಯಿತಿಯಿಂದ ನೀಡಲಾಗುತ್ತಿದೆ, ಮುಂತಾದ ಯೋಜನೆಗಳನ್ನು ಮಾಡಿಕೊಟ್ಟಿದ್ದೇನೆ. 

ಕಿರುದಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌, ಉದ್ಯಾನವನ ಹಾಗೂ ಶೌಚಾಲಯ ನಿರ್ಮಾಣ ಮಾಡಲು ಕ್ರೀಯಾ ಯೋಜನೆ ಇದೆ.

30 ಎಸ್‌.ಸಿ/ಎಸ್‌.ಟಿ ಮನೆಗಳಿಗೆ ತಲಾ ಸುಮಾರು 4,500 ರೂ ವೆಚ್ಚದ ಎಲ್‌.ಈ.ಡಿ. ಸೋಲಾರ್‌ ದೀಪವನ್ನು ನೀಡಲು ಯೋಜನೆ ಇದೆ.

ಕಿರುದಾಲೆ ಸೇತುವೆಗೆ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್‌ ಅವರು ನೀಡಿದ ಅನುದಾನದಿಂದ ಕಾಮಗಾರಿ  ಪೂರ್ಣವಾಗಿದ್ದು, ತಡೆಗೋಡೆ ನಿರ್ಮಾಣ ಕಾರ್ಯವು ಬಾಕಿ ಇದೆ. ಹಾಗೆ ನಮ್ಮ ಕಿರುದಾಲೆ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳ ಮನೆಗಳನ್ನು ಮರು ನಿರ್ಮಾಣ ಮಾಡಲು ಮಾದಾಪುರದ ಕಾರ್ಯಪ್ಪ ಬಡಾವಣೆಯಲ್ಲಿ ಜಾಗ ಮಂಜೂರಾಗಿದ್ದು, ಅದರಲ್ಲಿ ಈಗಾಗಲೇ ಪ್ರಾರಂಭಿಕ ಹಂತದಲ್ಲಿ ಎರಡು ಮನೆಗಳನ್ನು ನಿರ್ಮಿಸಲು ಕಾಮಗಾರಿ ಆದೇಶ ಬಂದಿದ್ದು, ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಇನ್ನುಳಿದ ಎಂಟು ಕುಟುಂಬಗಳ ಮನೆಗಳ ನಿರ್ಮಾಣ ಕಾರ್ಯವು ಸರಕಾರದ ಆದೇಶ ಪತ್ರ ತಲುಪಿದ ಕೂಡಲೇ ಶೀಘ್ರದಲ್ಲೇ ಕೈಗೆತ್ತಿ ಪೂರ್ಣಗೊಳಿಸಲಾಗುವುದು.

ನಮ್ಮ ಆಡಳಿತ ಅವಧಿ ಇನ್ನು ಕೇವಲ 1 ವರ್ಷ ಮಾತ್ರ ಬಾಕಿ  ಇದ್ದು, ಯೋಜನೆಗಳ ಅನುಷ್ಟಾನಕ್ಕೆ ಸಮಯ ಸಾಲುವುದಿಲ್ಲ. ಆದರಿಂದ ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಹೆಚ್ಚು ಅನುದಾನವನ್ನು ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲು ಇಚ್ಚೆಯಿದೆ. ಅಲ್ಲದೆ ನಾನು ಗ್ರಾಮದಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ಮೆಚ್ಚಿ ಮನಗಂಡಿರುವ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯಿತಿ  ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಕೂಡ ಒಲವು ವ್ಯಕ್ತಪಡಿಸಿದ್ದಾರೆ. 

ಒಟ್ಟಿನಲ್ಲಿ ನಮ್ಮ ಗ್ರಾಮವನ್ನು ಇನ್ನಷ್ಟು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಹೆಜ್ಜೆಯಿಟ್ಟಿದ್ದೇನೆ. ನನ್ನ ಈ ಎಲ್ಲಾ ಕೆಲಸ ಕಾರ್ಯಗಳಿಗೆ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”

ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸುರೇಶ್‌ ಟಿ.ಬಿ. ಯವರು ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ಕೊಡಗು ಹಿಂದೂ ಮಲಯಾಳಿ ಸಂಘದ ಸೋಮವಾರಪೇಟೆ ತಾಲೂಕು ಘಟಕದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಮಾದಾಪುರದ ಶ್ರೀ ಗಣಪತಿ ದೇವಾಸ್ಥಾನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಿರುದಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದಾರೆ.

ಸುರೇಶ್‌ ಟಿ.ಬಿ. ಯವರ ಕುಟುಂಬ ಪರಿಚಯ:

ಸುರೇಶ್‌ ಟಿ.ಬಿ. ಯವರ ತಂದೆ: ದಿವಂಗತ ಟಿ.ಆರ್‌. ಬಾಲನ್‌. ತಾಯಿ : ಶಾರದಾ. ಪತ್ನಿ: ರೇಖಾ, ಆಶಾ ಕಾರ್ಯಕರ್ತೆ ಯಾಗಿದ್ದಾರೆ. ಮಗ: ಸುಶಾಂತ್‌, ಮಗಳು: ಇಶಾನಿ ವ್ಯಾಸಾಂಗ ನಿರತರಾಗಿದ್ದಾರೆ.

ಸುರೇಶ್‌ ಟಿ.ಬಿ. ಯವರು ಪ್ರಸ್ತುತ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಿರುದಾಲೆ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 28-05-2024