Header Ads Widget

Responsive Advertisement

ಮೂರ್ನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ 11ನೇ ವರ್ಷದ ವಾರ್ಷಿಕ ಉತ್ಸವ

ಮೂರ್ನಾಡು: ಇಲ್ಲಿನ ಗಾಂಧಿನಗರದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ 11ನೇ ವರ್ಷದ ವಾರ್ಷಿಕ ಉತ್ಸವವು ತಾ. 5 ಮತ್ತು 7 ರಂದು ನಡೆಯಲಿದೆ. 

ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಾರ್ಷಿಕ ಉತ್ಸವದ ಪ್ರಯುಕ್ತ ತಾ. 5ರಂದು ಸಂಜೆ 4-೦೦ ಗಂಟೆಗೆ ಮಹಾಪೂಜೆ, 7-೦೦ ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ನಂತರ ತೀರ್ಥಪ್ರಸಾದ ವಿತರಣೆ ಮಾಡಲಾಗುವುದು.

ತಾ. 7ರಂದು ಬೆಳಗ್ಗೆ 7-೦೦ ಗಂಟೆಗೆ  ಮಹಾಪೂಜೆ ನಡೆಯಲಿದ್ದು, ನಂತರ ಭಕ್ತಾದಿಗಳಿಂದ ದೇವರಿಗೆ ಹರಕೆ ವಸ್ತುಗಳನ್ನು ಒಪ್ಪಿಸಲಾಗುವುದು. 3-೦೦ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಚಿತ್ರ ಮತ್ತು ವರದಿ: ಟಿ.ಸಿ. ನಾಗರಾಜ್, ಮೂರ್ನಾಡು