Header Ads Widget

Responsive Advertisement

ಕಾರ್ಮಾಡುವಿನಲ್ಲಿ ಮನೆಯ ಗೊಡೆ ಕುಸಿತ: ಅಧಿಕಾರಿಗಳಿಂದ ಪರಿಶೀಲನೆ

ಗಾಳಿ ಮಳೆಗೆ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕಾರ್ಮಾಡು ಕುದನೆಕೊಡಿರ ಮಣಿ ಬೆಳ್ಳಿಯಪ್ಪ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಸ್ಥಳಕ್ಕೆ ಬಾಳೆಲೆ ಕಂದಾಯ ಪರಿವೀಕ್ಷಕ ಶರೀಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟವನ್ನು ಅಂದಾಜು ಮಾಡಿ ಪರಿಹಾರಕ್ಕೆ ಶಿಪಾರಾಸು ಮಾಡುವುದಾಗಿ ತಿಳಿಸಿದ್ದಾರೆ.

ಗ್ರಾ.ಪಂ ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಪಡಿಞರಂಡ ಕವಿತಾ ಪ್ರಭು, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸುರೇಶ್, ಗ್ರಾಮಲೆಕ್ಕಿಗರಾದ ಕಾಸವ್ವ, ಕಂದಾಯ ಇಲಾಖಾ ಸಿಬ್ಬಂದಿ ಗಣೇಶ್, ಪ್ರಮುಖರಾದ ಗಾಣಂಗಡ ಸುದೀಪ್ ಹಾಜರಿದ್ದರು.