Header Ads Widget

Responsive Advertisement

ಮೂರ್ನಾಡಿನ ವಿವೇಕ ಜಾಗ್ರತ ಬಳಗದದಿಂದ ಆಯೋಜನೆಗೊಂಡ ರಕ್ತದಾನ ಶಿಬಿರ

ಮೂರ್ನಾಡು: ಸಾಲಿಗ್ರಾಮದ ಡಿವೈನ್‌ಪಾರ್ಕ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಮೂರ್ನಾಡುವಿನ ವಿವೇಕ ಜಾಗ್ರತ ಬಳಗದ ವತಿಯಿಂದ ಆಯೋಜಿಸಲಾದ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು.

ಮೂರ್ನಾಡುವಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಹೆಚ್ಚುವುದಲ್ಲದೆ ಇದರಿಂದ ಇನ್ನೊಬ್ಬರಿಗೆ ಜೀವದಾನ ನೀಡಿದಂತಾಗುತ್ತದೆ ಎಂದ ಅವರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹಲವಾರು ಮನುಷ್ಯರ ಜೀವಗಳನ್ನು ಉಳಿಸಿಕೊಳ್ಳುವ ಕಾರ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂರ್ನಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ ಕುಮಾರ್ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲೆಡೆ ಡೆಂಗ್ಯೂ ಇರುವ ಕಾರಣ ಪ್ಲೇಟ್‌ಲೆಟ್ ಆಭಾವವಿರುವ ಕಾರಣದಿಂದ ಈ ಶಿಬಿರ ಅತ್ಯವಶ್ಯಕವಾದುದಾಗಿದೆ. ಇಂತಹ ಆರೋಗ್ಯಕ್ಕೆ ಸಂಬAಧಿಸಿದ ಶಿಬಿರಗಳ ಆಯೋಜನೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮುಕ್ತ ಅವಕಾಶ ನೀಡುವುದಲ್ಲದೆ, ಎಲ್ಲಾ ರೀತಿಯ ಸಹಾಯ-ಸಹಕಾರವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು. ಬಳಗ ಸದಸ್ಯೆ ಜೈನಿ ಶೃತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ  ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ, ವಿವೇಕ ಜಾಗ್ರತ ಬಳಗದ ಅಧ್ಯಕ್ಷೆ ದಿವ್ಯ ತೇಜಕುಮಾರ್, ಉಪಾಧ್ಯಕ್ಷ ಯಶವಂತ್ ಮತ್ತು ಬಳಗದ ಸದಸ್ಯರು ಹಾಜರಿದ್ದರು.

ಬೆಳಗ್ಗೆ 10 ಗಂಟೆಯಿಂದ ಪ್ರಾರಂಭಗೊಂಡ ರಕ್ತದಾನ ಶಿಬಿರದಲ್ಲಿ ಮೂರ್ನಾಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಧಿಕ ಜನರು ಭಾಗವಹಿಸಿದ್ದು, ಸುಮಾರು 57ಕ್ಕೂ ಹೆಚ್ಚು ಸಾರ್ವಜನಿಕರು ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಬಳಗದ ವತಿಯಿಂದ ಹಣ್ಣು-ಹಂಪಲು, ಜ್ಯೂಸ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. 

ಚಿತ್ರ ಮತ್ತು ವರದಿ: ಟಿ.ಸಿ. ನಾಗರಾಜ್, ಮೂರ್ನಾಡು