ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ದಾನಿಗಳಾದ ಸಿಸ್ಟರ್ ಪ್ರೆಸಿಲ್ಲ ಕುಮಾರಿ ಇವರ ಸಹಕಾರದೊಂದಿಗೆ ಹಣಸೆ ಹಿರಿಯ ಪ್ರಾಥಮಿಕ ಶಾಲೆಯ 16 ಮಕ್ಕಳಿಗೆ ಬರೆಯುವ ಪುಸ್ತಕ ಮತ್ತು ಪರಿಕರಗಳ ವಿತರಣೆ ಮಾಡಲಾಯಿತು.
ಕೊಡಗು ಜಿಲ್ಲೆಯ ಶನಿವಾರಸಂತೆ ಹೋಬಳಿಯ ಬಸವನಕೊಪ್ಪ ಗ್ರಾಮದ ಪಕ್ಕದಲ್ಲಿ ಇರುವ ಗಡಿ ಭಾಗಕ್ಕೆ ಹೊಂದಿಕೊಂಡ ಹಾಸನ ಜಿಲ್ಲೆಗೆ ಸೇರಿದ ಸಕಲೇಶಪುರ ತಾಲೂಕಿನ ಹಣಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ಮತ್ತು ಪರಿಕರಗಳನ್ನು ದಾನಿಗಳಾದ ಪ್ರೆಸಿಲ್ಲ ಕುಮಾರಿ ಅವರಿಂದ ವಿತರಿಸಲಾಯಿತು.
ಪ್ರೆಸಿಲ್ಲ ಕುಮಾರಿ ಮಾತನಾಡಿ ನಾನು ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದು, ಈ ಶಾಲೆಯಲ್ಲಿ ಓದಿ ಇಂದು ನಾನು ಕಿನ್ಯಾ ಹೊರ ದೇಶದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಈಗ ಮೈಸೂರಿನಲ್ಲಿ ಶಿಕ್ಷಕಿಯಾಗಿ ಆಗಿ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಓದಿದ ಶಾಲೆಗೆ ನನ್ನ ಕೈಲಾದ ಸಹಾಯ ಮಾಡಬೇಕೆಂದು ಈ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪರಿಕಾರಗಳನ್ನು ವಿತರಿಸುತ್ತದ್ದೇನೆ. ಅದರೊಂದಿಗೆ ಸಿಹಿಯನ್ನು ನೀಡುತ್ತಿದ್ದೇನೆ ಎಂದು ತಿಳಿಸಿದರು. ನಂತರ ಮಾತನಾಡಿದ ಇವರು ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಮುಂದೆ ಬರಬೇಕು ಶಾಲೆಗೆ ಒಳ್ಳೆಯ ಹೆಸರು ತಂದುಕೊಡಬೇಕು ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತಂದುಕೊಡಬೇಕಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಂಬಾಮಣಿ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ನೀವು ಪುಸ್ತಕಗಳನ್ನು ಕೊಡುತ್ತಿರುವುದು ಸಂತೋಷಕರ ವಿಚಾರ ಪುಸ್ತಕಗಳು ಮತ್ತು ಪರಿಹಾರಗಳನ್ನು ಕೊಟ್ಟ ಸಿಸ್ಟರ್ ಪ್ರೆಸಿಲ್ಲ ಕುಮಾರಿ ರವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು. ಹಾಗೂ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರಾದ ಅಂಬಾಮಣಿ ಹಾಗೂ ಸಹ ಶಿಕ್ಷಕರಾದ ದಿವ್ಯ ದಿನೇಶ್ ಇವರುಗಳೊಂದಿಗೆ ಎಸ್ಎಂಸಿ ಅಧ್ಯಕ್ಷರಾದ ಪೂರ್ಣಿಮ ರವರು ಸಿಸ್ಟರ್ ಪ್ರೆಸಿಲ್ಲ ಕುಮಾರಿ ರವರನ್ನು ಸನ್ಮಾನಿಸಿದರು. ಹಾಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಹಾಗೂ ಹಾಗೂ ಪುಸ್ತಕದಾನಿಗಳಾದ ಸಿಸ್ಟರ್ ಪ್ರಸಿಲ್ಲ ಹಾಗೂ ಮುಖ್ಯ ಶಿಕ್ಷಕಿಯಾದ ಅಂಬಾಮಣಿ ರವರು ಹಾಗೂ ಸಹ ಶಿಕ್ಷಕರಾದ ದಿವ್ಯ ದಿನೇಶ್ ರವರು ಹಾಗೂ ಎಸ್ ಟಿ ಎಮ್ ಸಿ ಅಧ್ಯಕ್ಷರಾದ ಪೂರ್ಣಿಮ ರವರು, ಸಹ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network