ಪೊನ್ನಪಸಂತೆ ಗ್ರಾ.ಪಂ.ಅಧ್ಯಕ್ಷರು ಶ್ರೀ ತೀತರಮಾಡ ಬೋಸು ಕುಶಾಲಪ್ಪ ಹಾಗೂ ಗ್ರಾ.ಪಂ ಸದಸ್ಯರು ಶ್ರೀ. ವಿನು ಚೆಂಗಪ್ಪ ನೇತೃತ್ವದಲ್ಲಿ ಕಾಫಿ ಮಂಡಳಿ ಹಾಗೂ ಸುಕ್ಡೆನ್ ಕಾಫಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಸುಸ್ಥಿರ ಕಾಫಿ ಉತ್ಪಾದನಾ ಕಾರ್ಯಾಗಾರವನ್ನು ಪೊನ್ನಪಸಂತೆ ಗ್ರಾ.ಪಂ.ಸಮುದಾಯ ಭವನ, ಪೊನ್ನಪಸಂತೆ, ಬಾಳೆಲೆ ವಲಯ ನಡೆಸಲಾಯಿತು.
ಕಾಫಿ ಮಂಡಳಿಯ ಮಣ್ಣು ವಿಜ್ಞಾನಿ ಡಾ.ಎಸ್.ಎ.ನದಾಫ್ ಕಾಫಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ಉಪನ್ಯಾಸ ನೀಡಿ ಮಧ್ಯ ಮಳೆಗಾಲದಲ್ಲಿ ಕಾಫಿ ಗಿಡಗಳಿಗೆ ಅಗತ್ಯವಿರುವ ಪೋಷಕಾಂಶಗಳ ಕುರಿತು ಮಾಹಿತಿ ನೀಡಿದರು.
ಕಾಫಿ ಮಂಡಳಿಯ ಕೃಷಿ ಬೇಸಾಯ ತಜ್ಞ ಡಾ.ನಾಗರಾಜ್ ಗೋಕಾವಿ ಅವರು ಕಾಫಿ ಕೃಷಿಯಲ್ಲಿ ಸುಸ್ಥಿರ ಬೇಸಾಯ ಪದ್ಧತಿಗಳ ಬಗ್ಗೆ ಮತ್ತು ಅತಿವೃಷ್ಟಿಯಲ್ಲಿ ಕೀಟ ಮತ್ತು ರೋಗಗಳ ಬಾಧೆ ಕಡಿಮೆ ಮಾಡುವುದು ಹೇಗೆ ಎಂದು ತಿಳಿಸಿದರು.
ಸುಕ್ಡೆನ್ ಕಾಫಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಸ್ಟೈನಬಿಲಿಟಿ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀ ರಥನ್ ಅವರು ಕಾಫಿ ಬೆಳೆಯುವ ಪ್ರದೇಶದಲ್ಲಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸುಸ್ಥಿರ ಕಾಫಿ ಉತ್ಪಾದನೆಗೆ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳನ್ನು ವಿವರಿಸಿದ ಶ್ರೀ. ಮುಖಾರಿಬ್ ಡಿ. ಎಸ್. ಕಿರಿಯ ಸಂಪರ್ಕ ಅಧಿಕಾರಿಗಳು ರವರು ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯ ಸಬ್ಸಿಡಿ ಯೋಜನೆಗಳ ಬಗ್ಗೆ ತಿಳಿಸಿದರು. ಕಾಫಿ ತೋಟಕ್ಕೆ ಸಂಬಂಧಿಸಿದ ಮರು ನಾಟಿ, ಗೋದಾಮು, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪ್ರಿಂಕ್ಲರ್ ಉಪಕರಣಗಳು, ಮೋಟಾರ್, ಮಿನಿ ಟ್ರ್ಯಾಕ್ಟರ್ ಮತ್ತು ಇತರ ಯಂತ್ರೋಪಕರಣಗಳಿಗೆ ಸಹಾಯಧನದ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಲಾಯಿತು.
30ಕ್ಕೂ ಹೆಚ್ಚು ಕಾಫಿ ಬೆಳೆಗಾರರು ಈ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು. ಶ್ರೀ ವಿನು ಚೆಂಗಪ್ಪ ಸ್ವಾಗತಿಸಿದರು ಹಾಗೂ ವಂದಿಸಿದರು.