Header Ads Widget

ಸರ್ಚ್ ಕೂರ್ಗ್ ಮೀಡಿಯ

ಆರ್.ಎಸ್.ಎಸ್(RSS) ಕೊಡಗು ಜಿಲ್ಲಾ ಕಾರ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೊಡಗು ಜಿಲ್ಲಾ ಕಾರ್ಯಾಲಯ ಮಧುಕೃಪಾದಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾರ್ಯವಾಹ ಶ್ರೀ ರವಿ ಕುಶಾಲಪ್ಪನವರು "ಶತಾಬ್ದಿಯ ಹೊಸ್ತಿಲಲ್ಲಿ ಆರ್.ಎಸ್.ಎಸ್.(RSS) ಇದ್ದು, "ಸಾಮಾಜಿಕ ಪರಿವರ್ತನೆಗಾಗಿ ಪಂಚಕಾರ್ಯಗಳು" ಎಂಬ ಅಭಿಯಾನವನ್ನು ಕೈಗೊಂಡಿದೆ ಎಂದರು. ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ್, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜೀವನಶೈಲಿ, ನಾಗರಿಕ ಶಿಷ್ಟಾಚಾರದ ಮೂಲಕ ಸದೃಢ ಸಮಾಜವನ್ನು ನಿರ್ಮಿಸುವ ಕಾರ್ಯ ನಿರಂತರವಾಗಿ ಆಗುತ್ತಿದೆ, ಇಡೀ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಸದೃಢ ಸಮಾಜವನ್ನು ನಿರ್ಮಿಸುವ ಸಂಘದ ಧ್ಯೇಯದಂತೆ ಪ್ರಯತ್ನಗಳಾಗುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಭಾಗ ಪ್ರಚಾರಕರು,ಜಿಲ್ಲಾ ಪ್ರಚಾರಕರು, ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.