Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಳೆಲೆಯಲ್ಲಿ ಆಗಸ್ಟ್ 13ರಂದು ಕಾಫಿ ಮಂಡಳಿಯಿಂದ ಸಾಮರ್ಥ್ಯ ನಿರ್ಮಾಣ ಕಾರ್ಯಗಾರ

ಕಾಫಿ ಮಂಡಳಿ ಗೊಣಿಕೊಪ್ಪಲು ವತಿಯಿಂದ ಬಾಳೆಲೆ ಗ್ರಾಮ  ಪಂಚಾಯಿತಿ  ಸಹಯೋಗದೊಂದಿಗೆ ಬಾಳೆಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅಗಸ್ಟ್ 13ರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಗಾರವು ನಡೆಯಲಿದ್ದು, ಈ ವರ್ಷದ ಅತೀ ಹೆಚ್ಚಿನ ಮಳೆಯಿoದಾಗಿ  ಕಾಫಿ ಗಿಡಗಳಲ್ಲಿ  ಕೊಳೆರೋಗ ಮತ್ತು  ಕಾಫಿ ಉದುರುವುದರ ಬಗ್ಗೆ, ಮರು ನಾಟಿ, ಗೋಡೌನ್,  ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪ್ರಿಂಕ್ಲೇರ್ ಉಪಕರಣ, ಮೋಟಾರ್ ಮುಂತಾದವು ಗಳಿಗೆ ಸಬ್ಸಿಡಿ ಕಾಫಿ ಮಂಡಳಿಯಿಂದ ನೀಡಲಾಗುತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು ಕಾಫಿ ಬೆಳೆಗಾರರು ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿ ಕಾಫಿ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.