ಅಕ್ಟೋಬರ್ 1 ರಂದು ಲೋಕಾರ್ಪಣೆಗೆ ಸಜ್ಜುಗೊಂಡ “ಸಾಯಿ ಪೆಟ್ ಸ್ಟೇಷನ್”
ಪೊನ್ನಂಪೇಟೆ ಸಮೀಪದ ಪ್ರಶಾಂತಿ ನಿಲಯದಲ್ಲಿ ವೈವಿಧ್ಯಮಯ ಸಾಕುಪ್ರಾಣಿಗಳ ಕುಟುಂಬದೊಂದಿಗೆ ನಿಮ್ಮ ಗುಣಮಟ್ಟದ ಸಮಯವನ್ನು ಆನಂದಿಸಲು ಸಜ್ಜುಗೊಂಡಿರುವ “ಸಾಯಿ ಪೆಟ್ ಸ್ಟೇಷನ್” ಅಕ್ಟೋಬರ್ 1 ರಂದು ಲೋಕಾರ್ಪಣೆಗೊಳ್ಳಲಿದೆ.
ಸಾಯಿ ಪೆಟ್ ಸ್ಟೇಷನ್ ನ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಬಿ.ಜಿ.ಅನಂತಶಯನ, ಒಲಂಪಿಯನ್ ಹಾಕಿ ಆಟಗಾರರಾಗಿದ್ದ ಲೆಫ್ಟಿನೆಂಟ್ ಕರ್ನಲ್ ಬಿ.ಕೆ.ಸುಬ್ರಮಣಿ ಹಾಗು ಕೊಡಗು ಜಿಲ್ಲಾ ಹೋಟೆಲ್-ರೆಸಾರ್ಟ್-ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ ಇವರುಗಳು ಭಾಗವಹಿಸಲಿದ್ದಾರೆ.
ವೈವಿಧ್ಯಮಯ ಸಾಕುಪ್ರಾಣಿಗಳ ಸ್ವರ್ಗವಾದ ಸಾಯಿ ಪೆಟ್ ಸ್ಟೇಷನ್ ಅಕ್ಟೋಬರ್ 2 ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದು ಸಾಯಿ ಪೆಟ್ ಸ್ಟೇಷನ್ ನ ಮುಖ್ಯಸ್ಥರಾದ ಝರು ಗಣಪತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.