Header Ads Widget

Responsive Advertisement

ಕೊಡಗು ಜಿಲ್ಲೆಯ ರಸ್ತೆಗಳು ಮೇಲ್ದರ್ಜೆಗೆ ಅನುಮೋದನೆ: ಕೆ.ಜಿ.ಬೋಪಯ್ಯ

 


ರಾಜ್ಯದಲ್ಲಿನ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ 34 ಸಂಖ್ಯೆಯ 355.65 ಕಿ.,ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಹಾಗೂ 88 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲು ಅನುಮೋದನೆ ನೀಡಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದ್ದಾರೆ.
ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದ ರಸ್ತೆಗಳ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನ ಹಟ್ಟಿಹೊಳೆ-ಆವಂಡಿ-ಮುಕ್ಕೋಡ್ಲು-ಹಮ್ಮಿಯಾಲ ರಸ್ತೆಯಿಂದ 15 ಕಿ.ಮೀ.ವರೆಗೆ. ಕಾಟಕೇರಿ-ಗೋಳಿಕಟ್ಟೆ-ಹೆರವನಾಡು-ಆವಂದೂರು-ಬೆಟ್ಟತ್ತೂರು ರಸ್ತೆಯಿಂದ 15 ಕಿ.ಮೀ. ತಾಳತ್ತಮನೆ-ಮೇಕೇರಿ-ಬಿಳಿಗೇರಿ-ಅರುವತ್ತೋಕ್ಲು-ಬೆಟ್ಟಗೇರಿ ರಸ್ತೆ ಯಿಂದ 12 ಕಿ.ಮೀ. ರವರೆಗೆ. ಬಿಳಿಗೇರಿ-ಮುತ್ತಾರುಮುಡಿ-ಮರಗೋಡು ರಸ್ತೆ 12 ಕಿ.ಮೀ.ರವರೆಗೆ. ಮಕ್ಕಂದೂರು-ತಂತಿಪಾಲ-ಮುಕ್ಕೋಡ್ಲು-ಕಲ್ಲುಕೊಟ್ಟು-ಮಾಂದಲಪಟ್ಟಿ-ಕಾಲೂರು ರಸ್ತೆ 30 ಕಿ.ಮೀ.ವರೆಗೆ. ಕೋರಂಗಾಲ-ಚೇರಂಗಾಲ-ಭಾಗಮಂಡಲ ರಸ್ತೆ 9 ಕಿ.ಮೀ.ವರೆಗೆ. ಕಗ್ಗೋಡ್ಲು-ಕಡಗದಾಳು-ಬೋಯಿಕೇರಿ ರಸ್ತೆ 15 ಕಿ,ಮೀ.ವರೆಗೆ. ಕಡಂಗ-ಯಡಪಾಲ-ಬಾವಲಿ-ಚೆಯ್ಯಂಡಾಣೆ ರಸ್ತೆ 12 ಕಿ.ಮೀ., ಕೆ ಪೆರಾಜೆ-ಆಲೆಟ್ಟಿ ಕಾಪುಮಲೆ-ಮಂದಲ್ಪಾಡಿ-ಕುಂಬಳಚೇರಿಯಿಂದ ವಿಎಸ್ಎಸ್ಎನ್ ರಸ್ತೆ 12 ಕಿ.ಮೀ. ಒಟ್ಟು 132
ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು-ಕಡಂಗ ರಸ್ತೆ 13.40 ಕಿ.ಮೀ., ನಲ್ಲೂರು-ಬೆಸಗೂರು-ಬೆಕ್ಕಸ್ರೆಡ್ಲೂರು ರಸ್ತೆ 12.80 ಕಿ.ಮೀ., ಬಿಟ್ಟಂಗಾಲ-ವಿ.ಬಾಡಗ-ಕುಟ್ಟಂದಿ-ಬಿ ಶೆಟ್ಟಿಗೇರಿ ರಸ್ತೆ 10.25 ಕಿ.ಮೀ., ಟಿ.ಶೆಟ್ಟಿಗೇರಿ-ತೆರಾಳು-ಬಿರುನಾಣಿ ರಸ್ತೆ 10.20 ಕಿ.ಮೀ., ಟಿ.ಶೆಟ್ಟಿಗೇರಿ-ಬೀರುಗ-ಕುರ್ಚಿ-ಇರ್ಪು ದೇವಸ್ಥಾನ-ಕೈಮಣಿ ರಸ್ತೆ 15.20 ಕಿ.ಮೀ.ವರೆಗೆ. ಶ್ರೀಮಂಗಲ-ನಾಲ್ಕೇರಿ ರಸ್ತೆ 7 ಕಿ.ಮೀ., ಕಾಕೂರು-ಹೆರ್ಮಾಡು-ಬೊಳ್ಳಾರಿಗೇಟ್ ರಸ್ತೆ 6.90 ಕಿ.ಮೀ. ಹುದಿಕೇರಿ-ಬೇಗೂರು-ಬಳಪನಕೆರೆ ಸಿ.ಐ.ಟಿ ಕಾಲೇಜು ರಸ್ತೆ 6.40 ಕಿ.ಮೀ. ಮಾಯಾಮುಡಿ-ಬಾಲಾಜಿ-ಜೋಡುಬೀಟಿ-ಕುಂದ ರಸ್ತೆ 8.70 ಕಿ.ಮೀ.ಮ, ಬಿಟ್ಟಂಗಾಲ-ನಾಂಗಾಲ-ಬಾಡಗ ರಸ್ತೆ 7.50 ಕಿ.ಮೀ., ಕುಂದ-ಬಿ.ಶೆಟ್ಟಿಗೇರಿ ರಸ್ತೆ 5.40 ಕಿ.ಮೀ., ಒಂಟಿಯಂಗಡಿ-ಹಚ್ಚಿನಾಡು ರಸ್ತೆ 7 ಕಿ.ಮೀ., ಬೇತ್ರಿ-ಹೆಮ್ಮಾಡು-ಪಾರಾಣೆ ರಸ್ತೆ 6.70 ಕಿ.ಮೀ., ಒಟ್ಟು 117.45 ಕಿ.ಮೀ.
ಸೋಮವಾರಪೇಟೆ ತಾಲ್ಲೂಕಿನ ಚಿಕ್ಕತ್ತೂರು-ದೊಡ್ಡಮನೆಕೊಪ್ಪ-ದೊಡ್ಡತ್ತೂರು-ತೋಳೂರುಶೆಟ್ಟಳ್ಳಿ ರಸ್ತೆ 10 ಕಿ.ಮೀ., ಹೆಬ್ಬಾಲೆ ಹಳೆಕೋಟೆ-ಹೊಸಕೋಟೆ-ದೊಡ್ಡ ಅಳುವಾರ-ಬಸಿರುಗುಪ್ಪೆ-ಸಿದ್ದಲಿಂಗಪುರ ರಸ್ತೆ 10.40 ಕಿ.ಮೀ., ಸೋಮವಾರಪೇಟೆ ತಾಲ್ಲೂಕು ಬಿಳಿಗೇರಿ-ಹೊರೆಮನೆ ಪೈಸಾರಿ-ಕುಂಬೂರು ರಸ್ತೆ 6 ಕಿ,ಮೀ. ಕಬ್ಬಿನಸೇತುವೆ ದೇವಸ್ಥಾನ ವಂದೆವಾರು-ಕಿರಗಂದೂರು ಬಗಲ್ಕಂಡಿ-ಟೆಲಿಪೋನ್ ಎಕ್ಸೇಂಜ್-ಕಾಲಾಡಿ-ಬಿಳಿಗೇರಿಯಿಂದ ಗರ್ವಾಲೆ ರಸ್ತೆ 6 ಕಿ.,ಮೀ. ಅವರದಾಲು-ಕೊರಗಲ್ಲು-ಹೆಮ್ಮನೆ 1 ನೇ ಕೊಡ್ಲೂರು-ದೊಡ್ಡಬಾಂದ್ರ-ಚಿಕ್ಕಬಾಂದ್ರ-ಬೆಸೂರು ರಸ್ತೆ 8 ಕಿ.ಮೀ. ನೆರುಗಳಲೆ-ಮೋರಿಕಲ್ಲು-ಬಸವನಹಳ್ಳಿ-ಹಿತ್ತಲಮಕ್ಕಿ-ಅಬ್ಬೂರುಕಟ್ಟೆ-ತಣ್ಣೀರುಹಳ್ಳಿ-ವಾಲಗುಂದ-ದೊಡ್ಡಮಳ್ತೆ ರಸ್ತೆ 7.30 ಕಿ.ಮೀ. ಬಿ.ಟಿ.ಕಟ್ಟೆ-ಬಸವನಕೊಪ್ಪ-ಹನ್ಸೆ-ಸುಂಟಿ-ಕೊರಳಲಲ್ಲಿ-ಕೊಗೆಕೊಡಿ ರಸ್ತೆ 10 ಕಿ.ಮೀ., ಕೆದಕ್ಕಲ್-ಹೆರೂರು-ಭೂತನಕಾಡು-ಕಂಬಿಬಾಣೆ-ಹೊಸತೋಟ-ತಳ್ಳೂರು ರಸ್ತೆ 14.50 ಕಿ.ಮೀ., ಕೆದಕ್ಕಲ್-ಹಾಲೇರಿ-ಕಾಂಡನಕೊಲ್ಲಿ ರಸ್ತೆ 7 ಕಿ.ಮೀ., ಹೊಸತೋಟ-ಗರಗಂದೂರು-ಹರದೂರು ರಸ್ತೆ 7 ಕಿ.ಮೀ., ಗುಂಡುಕುಟ್ಟಿ-ಕಲ್ಲೂರು-ನಾಕೂರು-ಹೆರೂರು-ಬಸವನಹಳ್ಳಿ ರಸ್ತೆ 13 ಕಿ.ಮೀ. ಮತ್ತು ಮಾತನಹಳ್ಳಿ-ಕಲ್ಕಂದೂರು ರಸ್ತೆ 7 ಕಿ.ಮೀ. ಒಟ್ಟು 106.
ಮೂರು ತಾಲ್ಲೂಕಿನ ಒಟ್ಟು 355.65 ಕಿ.ಮೀ. ರಸ್ತೆಗಳನ್ನು ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಿದ ರಸ್ತೆಗಳ ವಿವರ:-ಮಡಿಕೇರಿ ತಾಲ್ಲೂಕಿನ ಮಡಿಕೇರಿ-ಭಾಗಮಂಡಲ-ತಣ್ಣಿಮಾನಿ-ಕರಿಕೆ 63 ಕಿ.ಮೀ. ಸೋಮವಾರಪೇಟೆ ತಾಲ್ಲೂಕಿನ ಗೋಪಾಲಪುರ-ಬಾಣಾವಾರ-ಹೆಬ್ಬಾಲೆ ರಸ್ತೆ 24.40 ಕಿ.ಮೀ. ಒಟ್ಟು 88 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.