Header Ads Widget

Responsive Advertisement

ಮಡಿಕೇರಿಯ "ಸ್ಪ್ಯಾರೋ ಕಾಫಿ ಮಳಿಗೆ"ಯಲ್ಲಿ ದಸರಾ ಸಂಭ್ರಮ!!!! ಜಾನಪದ ವಸ್ತುಗಳ ಪ್ರದಶ೯ನ


ಕೋರೋನಾ ಕಾಟದ ನಡುವೇ  ಮನಸ್ಸಿನ ಒಂದಿಷ್ಟು  ಹಿತಕ್ಕಾಗಿ  ಮಡಿಕೇರಿಯ ಗಾಂಧಿ ಮೈದಾನದ ಪಕ್ಕದಲ್ಲಿನ ಕಾಫಿ ಕೖಪಾ ಕಟ್ಟಡದಲ್ಲಿರುವ ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಜಾನಪದ ವಸ್ತುಗಳ ಪ್ರದಶ೯ನ ಆರಂಭವಾಗಿದೆ.

ರೋಟರಿ  ಮಿಸ್ಟಿ ಹಿಲ್ಸ್ ನ ಸದಸ್ಯರೂ ಆಗಿರುವ ಉತ್ಸಾಹಿ ತರುಣ ಪೊನ್ನಚ್ಚನ ಮಧು ಮತ್ತು ಪ್ರೀತು ದಂಪತಿ ಕಳೆದ 3 ವಷ೯ಗಳಿಂದ ಜಿಲ್ಲೆಯ ವಿವಿದೆಡೆ ಸಂಚರಿಸಿ ಸಂಗ್ರಹಿಸಿದ ಕೊಡಗಿನ ಹಳೇ ಕಾಲದ ವಸ್ತುಗಳು ಮತ್ತು ಮಧು ದೇಶದ ಹಲವೆಡೆಗಳಿಂದ ಲಕ್ಷಾಂತರ ರು. ವಿನಿಯೋಗಿಸಿ ತರಿಸಿಕೊಂಡ ಅಮೂಲ್ಯವಾದ ಜಾನಪದ ವಸ್ತುಗಳನ್ನು ನೀವಿಲ್ಲಿ ನೋಡಬಹುದು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಅ.16 ರಿಂದ ಅಕ್ಟೋಬರ್ 26 ವರೆಗೆ ಜಾನಪದ ದಸರಾ ಅಂಗವಾಗಿ ಇಲ್ಲಿ ಜಾನಪದದ ಅಪರೂಪದ ವಸ್ತುಗಳು ಪ್ರದಶ೯ನಕ್ಕಿಡಲ್ಪಟ್ಟಿದೆ. 

ಜಾನಪದ ದಸರಾವನ್ನು ನ್ಯಾಯಾಧೀಶೆ ಶ್ರೀಮತಿ ನೂರುನ್ನೀಸಾ ಉದ್ಘಾಟಿಸಿದರು. ಹಿರಿಯರನ್ನು ನಿಲ೯ಕ್ಷಿಸುತ್ತಿರುವಂತೆಯೇ ಹಳೇ ಕಾಲದ ವಸ್ತುಗಳನ್ನೂ ಕೂಡ ನಿಲ೯ಕ್ಷಿಸಲಾಗುತ್ತಿದೆ. ಹೀಗಾಗಿ ಇಂಥ ಜಾನಪದ ಪರಿಕರಗಳ ಪ್ರದಶ೯ನ ಇಂದಿನ ದಿನಗಳ ಅನಿವಾಯ೯ತೆ ಎಂದು ನೂರುನ್ನೀಸಾ ಅಭಿಪ್ರಾಯಪಟ್ಟರು. ತಾನು ಕೂಡ ಈ ಸಂಗ್ರಹಕ್ಕೆ ತನ್ನಲ್ಲಿನ ಕೆಲವು ಹಳೇ ಕಾಲದ ಅಪರೂಪದ ವಸ್ತುಗಳನ್ನು ಕೊಡುಗೆಯಾಗಿ ನೀಡುವುದಾಗಿ ನೂರುನ್ನಿಸಾ ಹೇಳಿದರು. 

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ,. ಋಷಿಮುನಿಗಳೂ ಸೇರಿದಂತೆ ಶ್ರೀಕೖಷ್ಣ, ಪೈಗಂಬರ್, ಏಸುಕ್ರಿಸ್ತ ಕೂಡ ಜಾನಪದವನ್ನು ಅವಲಂಭಿಸಿದರು ಎಂದು ಉದಾಹರಣೆಯೊಂದಿಗೆ ವಿವರಿಸಿದರು.

ವಿಭಿನ್ನ ಕಾಯ೯ಕ್ರಮಗಳಿಗೆ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಹೆಸರುವಾಸಿ ಎಂದೂ ಅನಂತಶಯನ ಶ್ಲಾಘಿಸಿದರು. 

ಜಾನಪದ ವಸ್ತುಗಳ ಸಂಗ್ರಾಹಕ ಪೊನ್ನಚ್ಚನ ಮಧು ಮಾತನಾಡಿ, ತಾನು ಹಳೇ ವಸ್ತುಗಳ ಗುಜರಿಗೆ ಹೋದಾಗ ಅಲ್ಲಿದ್ದ ಅರಿಫಾ ಮುನಾವರ್ ಎಂಬ ಅಜ್ಜಿಯೋವ೯ಳು ಅಪರೂಪದ ಗಡಿಯಾರ ನೀಡಿ ಇದನ್ನು ನಿನ್ನಲ್ಲಿಟ್ಟುಕೋ, ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸುವ ಕಾಯ೯ ಪ್ರಾರಂಭಿಸು ಎಂದದ್ದೇ ತನ್ನ ಸಂಗ್ರಹ ಇಷ್ಟೊಂದು ಬೖಹತ್ತಾಗಿ ಬೆಳೆಯಲು ಕಾರಣ ಎಂದು ಸ್ಮರಿಸಿದರು. 

ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ವೇದಿಕೆಯಲ್ಲಿದ್ದರು. ಪರಿಷತ್ ನಿದೇ೯ಶಕಿಯರಾದ  ಸವಿತಾ ರಾಕೇಶ್ ಪ್ರಾಥಿ೯ಸಿ, ವೀಣಾಕ್ಷಿ ವಂದಿಸಿದರು. 

ಹಳೇ ಕಾಲದ ಅನೇಕ ವಸ್ತುಗಳು ಜಾನಪದ ದಸರಾದಲ್ಲಿ ಕಂಗೊಳಿಸುತ್ತಿದ್ದು ಅಕ್ಟೋಬರ್ 26 ವರೆಗೆ ಪ್ರದಶ೯ನವನ್ನು ಸಾವ೯ಜನಿಕರು ವೀಕ್ಷಿಸಬಹುದಾಗಿದೆ. 

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಸ್ಯಾನಿಟೈಸರ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ.ಮನವಿ ಮಾಡಿದ್ದಾರೆ. 

ಅಂದಂತೆ,  ಸ್ಪ್ರಾರೋ ಕಾಫಿ ಮಳಿಗೆಯಲ್ಲಿ ಸ್ವಾದಿಷ್ಟ ಕಾಫಿ ಕೂಡ ದೊರಕುತ್ತದೆ. ಕಾಫಿ ಹೀರಲು ಮರೆಯದಿರಿ!!!!

ಆಸಕ್ತ ಸಂದಶ೯ಕರಿಗೆ ಸಂಪಕ೯ ಸಂಖ್ಯೆ - ಪೊನ್ನಚ್ಚನ ಮಧು - 9880381831