ಕವನ ರಚನೆ: ಮೂಟೇರ ಕೆ. ಗೋಪಾಲಕೃಷ್ಣ
ಹುತ್ತರಿ ಹಬ್ಬ ಬಂದಿದೆ
ಎಲ್ಲೆಲ್ಲೂ ಸಂತಸ ತಂದಿದೆ
ಬಂದಿದೆ ಎಲ್ಲೆಲ್ಲೂ ಸುಗ್ಗಿ
ಎಲ್ಲಾ ರೈತರ ಮನೆಗಳು
ಸಂತಸದಿ ತುಂಬಿದೆ ಹಿಗ್ಗಿ
ಬಂದಿದೆ ಹಬ್ಬ ಹುತ್ತರಿ
ಶಿವ ಕೈ ಬೆರಳುಗಳಿಂದ ತಿರುಗಿಸಿದನು
ಕಾಲದ ಬುಗುರಿ
ಕೊರೋನಾ ಎಂಬ
ಮಹಾಮಾರಿ ಮಾಟ
ನಡೆಯದು ಶಿವನ ಮುಂದೆ ಆಟ
ಹೊಸ ಅಕ್ಕಿಯನ್ನು
ಮನೆ-ಮನೆಗೆ ತುಂಬಿಸುವ ಗಳಿಗೆ
ಹೊಡೆಯುವರು ಪಟಾಕಿಯ
ಗಗನದ ಕಡೆಗೆ
ಹುತ್ತರಿಯ ಹಬ್ಬದ ಗೆಣಸು
ಹುತ್ತರಿಯ ಹಬ್ಬದ ತಂಬಿಟ್ಟು
ಊಟ ಮಾಡಿದವರಿಗೆ
ಗೊತ್ತು ಅದರ ಗುಟ್ಟು
ಹೋದ ವರುಷ ಸಂತಸ ತಂದ ಹಬ್ಬ
ಮರಳಿ ಬಂದಿದೆ ಹುತ್ತರಿ ಹಬ್ಬ
ತೀರ್ಥ ಪ್ರೋಕ್ಷಣೆ ಮಾಡುತ್ತಾ
ಕಾವೇರಿ ಮಾತೆಯ ನಮಿಸುವ
ದೀಪ ಹಚ್ಚಿ ಇಗ್ಗುತ್ತಪ್ಪನ ನಮಿಸುವ
ಕಾಪಾಡು ನಮ್ಮನ್ನು ಎಂದು ಬೇಡುವ
ಎಲ್ಲಾ ದುಃಖಗಳನ್ನು ಮಾಯವಾಗಿಸಿ
ನಮಗೆಲ್ಲ ಸಮೃದ್ಧಿಯನ್ನು ತರಲಿ
ಈ ಹುತ್ತರಿ ನಮ್ಮ ಕೊಡಗಿನ ಹುತ್ತರಿ
ರಚನೆ:
ಮೂಟೇರ ಕೆ. ಗೋಪಾಲಕೃಷ್ಣ
ನೀವೃತ್ತ ಪೋಸ್ಟ್ ಮಾಸ್ಟರ್
ಕೆ.ಚೆಟ್ಟಳ್ಳಿ
Mob: 94480427572