ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ. ಡಿಸೆಂಬರ್ 22 ಮತ್ತು 27ರಂದು ಚುನಾವಣೆ. ಡಿಸೆಂಬರ್ 30ರಂದು ಪಂಚಾಯಿತಿ ಚುನಾವಣಾ ಫಲಿತಾಂಶ.
ಆಯಾ ಜಿಲ್ಲಾಧಿಕಾರಿಗೆ 2 ಹಂತಗಳಲ್ಲಿ ಯಾವ ಪಂಚಾಯತಿಗಳನ್ನು ಮೊದಲ ಹಂತ ಮತ್ತು ಯಾವ ಪಂಚಾಯಿತಿ ಎರಡನೇ ಹಂತದಲ್ಲಿ ಚುನಾವಣೆ ನಡೆಸಬೇಕೆಂಬ ತೀರ್ಮಾನಕ್ಕೆ ಅಧಿಕಾರ.
ಜಿಲ್ಲಾಧಿಕಾರಿ ನಿಗದಿ ಮಾಡಲಿರುವ ಚುನಾವಣೆ ದಿನಾಂಕ. ಮೊದಲ ಹಂತದಲ್ಲಿ ಶೇಕಡ 50ರಷ್ಟು ಪಂಚಾಯಿತಿಗಳಿಗೆ ಚುನಾವಣೆ. ಉಳಿದ ಎರಡನೇ ಹಂತದಲ್ಲಿ ಬಾಕಿ ಇರುವ ಪಂಚಾಯಿತಿಗಳಿಗೆ ಚುನಾವಣೆ.
ಮೊದಲ ಹಂತದ ಚುನಾವಣೆ ಡಿಸೆಂಬರ್ 11 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ. ಹಿಂಪಡೆಯಲು 14 ಕೊನೆಯ ದಿನಾಂಕ.
ಎರಡನೆ ಹಂತದ ಚುನಾವಣೆಗೆ ಡಿಸೆಂಬರ್ 16 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ ಡಿಸೆಂಬರ್ 19 ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ
ಕೊಡಗಿನಲ್ಲಿ ಮತ ಪತ್ರದ ಮೂಲಕ ಚುನಾವಣೆ ಮತ ಯಂತ್ರದ ಬಳಕೆ ಇಲ್ಲ.
ರಾಜ್ಯ ಚುನಾವಣಾ ಆಯೋಗದಿಂದ ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆ.
ಇಂದಿನಿಂದಲೇ ರಾಜ್ಯವ್ಯಾಪಿ ಚುನಾವಣಾ ನೀತಿ ಸಂಹಿತೆ ಜಾರಿ.