ವಿಶೇಷ ವರದಿ:ಗಿರಿಧರ್ ಕೊಂಪುಳೀರಾ
ಕೊಡಗು: ಆನೆ ನಡೆದದ್ದೇ ದಾರಿ ಎನ್ನುವುದೊಂದು ಗಾದೆ ಮಾತು ಆದರೂ ಆನೆ ಪಥದಲ್ಲಿ ಕೃಷಿ ಚಟುವಟಿಕೆ, ರೆಸಾರ್ಟ್, ಹೋಂಸ್ಟೇ ಸೇರಿದಂತೆ ಸರ್ಕಾರಿ ಆಸ್ತಿ ಮುಟ್ಟುಗೋಲು ಮಾಡಿ ರಸ್ತೆಗಳನ್ನು ನಿರ್ಮಿಸುತ್ತಿರುವುದರಿಂದ ಕಾಡಾನೆಗಳ ಪ್ರಮುಖ ಕಾರಿಡಾರಿನಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ.
ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲದಿದ್ದರೂ ಆಹಾರ ಅರಸಿ ಒಂದು ಕಡೆಯಿಂದ ಮತ್ತೊಂದು ಎಡೆಗೆ ತೆರಳುವ ಗಜಪಡೆ ಕೇರಳ, ತಮಿಳುನಾಡು ಮೂಲಕ ಕರ್ನಾಟಕ ಪಶ್ಚಿಮ ಘಟ್ಟದವರೆಗೂ ತಲುಪುತ್ತವೆ, ಕಾರಣ ಇಷ್ಟೆ ಅವುಗಳಿಗೆ ಸೂಕ್ತವಾದ ಆಹಾರ ಕಾಡಿನಲ್ಲಿ ಲಭ್ಯವಿಲ್ಲ ಎಂದು ಅರ್ಥ. ತಮಿಳುನಾಡಿನ ಮುದುಮಲೈ ರಕ್ಷಿತಾರಣ್ಯ, ಕೇರಳದ ವೈನಾಡು ರಕ್ಷಿತಾರಣ್ಯ, ಸುತ್ತಮುತ್ತಲಿನ ಪ್ರದೇಶದಿಂದ ರಾಜ್ಯದ ಬಂಡೀಪುರ ತಲುಪಿ, ಕಬಿನಿ ಮೂಲಕ ನಾಗರಹೊಳೆ ಮೂಲಕ ಕೊಡಗು ಜಿಲ್ಲೆ ಪ್ರವೇಶಿಸಿ, ದಾರಿಯುದ್ದಕೂ ಮೇವು ಸಂಗ್ರಹಿಸುವುದರ ಜೊತೆ ಸಂತಾನಭಿವೃದ್ದಿ ಮಾಡಿಕೊಂಡು ಅವುಗಳ ಪರಂಪಾರಾಗತ ದಾರಿಯಲ್ಲಿ ಸಿಗುವ ಕಾಫಿ ಎಸ್ಟೇಟ್‌ಗಳೆ ತಮ್ಮ ಆವಾಸ ತಾಣವನ್ನಾಗಿ ಮಾಡಿಕೊಂಡಿದೆ.
ಈ ನಡುವೆ ಕಾಡಿನ ಅಂಚಿನಲ್ಲಿರುವ ಗ್ರಾಮಗಳಲ್ಲಿ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ರೈಲು ಕಂಬಿ ಸಹಾಯದ ತಡೆಗೋಡೆ, ಮುಳ್ಳುತಂತಿ ಗೋಡೆ ಸೇರಿದಂತೆ ಸೋಲಾರ್ ಬೇಲಿ ಒಂದಡೆಯಾದರೆ ಇನ್ನೊಂದೆಡೆ ಅವೈಜ್ಞಾನಿಕವಾಗಿ ವಿದ್ಯುತ್ ತಂತಿ ನಿರ್ಮಾಣ ಮಾಡಿರುವ ಪರಿಣಾಮ ಮೇವಿಗಾಗಿ ಹುಡುಕಾಟ ನಡೆಸುವ ಸಂದರ್ಭ ಕೆಲವೊಂದು ಸಂದರ್ಭ ಕಾಡಾನೆಗಳು ಆಕಾಸ್ಮಾತಾಗಿ ಅವೈಜ್ಞಾನಿಕ ವಿದ್ಯುತ್ ತಂತಿಗೆ ಸಿಲುಕಿ ಸಾವನಪ್ಪುತ್ತಿದೆ ಇದಕ್ಕೆ ತಾಜಾ ಉದಾಹರಣೆಯಂತೆ ಸುಂಟಿಕೊಪ್ಪದಲ್ಲಿ ತನ್ನ ಕೃಷಿ ರಕ್ಷಣೆಗೆ ವಿದ್ಯುತ್ ಕಳ್ಳತನ ಮಾಡಿ ಬೇಲಿ ನಿರ್ಮಿಸಿದಲ್ಲದೆ ಆನೆ ಸತ್ತು ಎರಡು ಮೂರು ದಿನ ಕಳೆದರೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿಲ್ಲ, ಅದರಂತೆ ಕೆಲವು ವರ್ಷಗಳ ಹಿಂದೆ ಅಮತ್ತಿ, ಗುಡ್ಡೆಹೊಸೂರು, ವಿರಾಜಪೇಟೆ ವ್ಯಾಪ್ತಿಯಲ್ಲಿ ಆನೆ ಹಿಂಡುಗಳು ದಾರುಣವಾಗಿ ಸಾವನಪ್ಪಿದೆ. ಅದರಲ್ಲೂ ಸಿದ್ದಾಪುರ ವ್ಯಾಪ್ತಿಯಲ್ಲಿ ಖಾಸಗಿ ಕಂಪೆನಿಗಳು ಸ್ಸಳೀಯರಿಂದ ಬ್ರಿಟೀಷರ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಕಾಫಿ ತೋಟದ ಪರಿಣಾಮ ಗ್ರಾಮದ ಒಳಗೂ ಪ್ರವೇಶಿಸುತ್ತಿದೆ, ಆಗಾಗೆ ನಗರ ಪ್ರದೇಶದಲ್ಲೂ ಕಾಣ ಸಿಗುತ್ತಿದೆ. ರಾಪಿಡ್ ರೆಸ್ಪಾನ್ಸ್ ಹೆಸರಿನ ಒಂದು ಅರಣ್ಯ ಇಲಾಖೆ ತಂಡ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಟೈಗರ್ ದೇವಯ್ಯ ನೇತೃತ್ತದ ತಂಡ ಕಾರ್ಯಪ್ರವೃತರಾಗಿದ್ದರೂ, ಅಗತ್ಯ ಸಿಬ್ಬಂಧಿ ಮತ್ತು ಮೂಲಭೂತ ವ್ಯವಸ್ತೆಗಳೂ ಕಾಡುತ್ತಿದೆ.
ಗಜಪಡೆ ಬರುವುದೇ ಗೊತ್ತಾಗುವುದಿಲ್ಲ:
ಇದ್ದು ಸತ್ಯ ಆನೆ ಪಥದಲ್ಲಿ ಸಾಗುವ ಆನೆಗಳ ಮರಿಗಳು ತುಂಬಿದ ಹಿಂಡು ಸಿದ್ದಾಪುರದ ನಂತರ ಹಾಸನ ಜಿಲ್ಲೆಯ ಪಶ್ಚಿಮಘಟ್ಟ ಪ್ರವೇಶಿಸುತ್ತಿದ್ದಂತೆ ಚುರುಕಾಗುತ್ತವೆ, ಹಲಸಿನ ಹಣ್ಣಿನ ಕಾಲದಲ್ಲಿ ಒಂದು ರೀತಿ ಸಮಸ್ಯೆಯಾದರೆ, ಭೂಮಿಯ ಒಡಲು ಬತ್ತಿ ಕೆರೆಕುಂಟೆಗಳು ಒಣಗುವ ಸಂದರ್ಭ ಕಡೆ ಪಕ್ಷ ನೀರಿಗಾಗಿ ಆದರೂ ಕೆರೆಗಳನ್ನು ಹುಡುಕಿ ಬರುತ್ತವೆ, ಹೀಗೆ ಕಾಫಿ ತೋಟದ ಕಾರ್ಮಿಕರಿಗೂ ಜೀವ ಬೆದರಿಕೆ ಇದೆ. ಶಾಲೆ ಕಾಲೇಜು ವಿದ್ಯಾರ್ಥಿಗಳಿಗೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅದೃಷ್ಟವಶಾತ್ ಶಾಲೆ ಕಾಲೇಜು ಇಲ್ಲದ ಕಾರಣ ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಕಾಣುತ್ತಿಲ್ಲ.
ಅರಣ್ಯ ಇಲಾಖೆ ಕಾಡಾನೆ ದಾಳಿ ತಡೆಗೆ ಕ್ರಮ ತೆಗೆದುಕೊಂಡಿದೆ. ಸಾವು-ನೋವಿಗೂ ಪರಿಹಾರ ವ್ಯವಸ್ಥೆ ಮಾಡುತ್ತಿದೆ. ಆದರೆ ಆನೆ ಮಾನವ ಸಂಘರ್ಷಕ್ಕೆ ಮಾತ್ರ ಮುಕ್ತಿ ಸಿಗುತ್ತಿಲ್ಲ.
Search Coorg Media