Header Ads Widget

ಸರ್ಚ್ ಕೂರ್ಗ್ ಮೀಡಿಯ

ನೂತನ ಕೃಷಿ ಕಾಯಿದೆಯ ಕುರಿತು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನಿಂದ ಮಾಹಿತಿ


ಐ.ಸಿ.ಎ.ಆರ್.ಕೃಷಿ ವಿಜ್ಞಾನ ಕೇಂದ್ರ,ಗೋಣಿಕೊಪ್ಪಲು ಇವರು ಭಾರತ ಸರಕಾರ ಇತ್ತಿಚೇಗೆ ತರುತ್ತೀರುವ ನೂತನ ಕೃಷಿ ಕಾಯಿದೆಯ ಕುರಿತು ಮಾಹಿತಿಯನ್ನು ನೀಡುತ್ತಿದೆ. ಈ ಕಾಯಿದೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲೆಯ ರೈತರ ಮನವರಿಕೆ ಮಾಡಿಕೊಡಲು ನೀಡಲಾಗುತ್ತಿದೆ. 


1. ಆರ್ಥಿಕ ಉದಾರೀಕರಣದ ಹೊರತಾಗಿಯೂ ಕೃಷಿ ಮತ್ತು ಇತರ ಕ್ಷೇತ್ರಗಳ ನಡುವಿನ ಅಸಮಾನತೆ 

  • ವಿಘಟಿತ (ತುಂಡು ತುಂಡಾದ) ಮಾರುಕಟ್ಟೆಗಳು ಹಾಗೂ ಮಾರುಕಟ್ಟೆಗಳ ಕೊರತೆ ಮತ್ತು ಹೆಚ್ಚಿನ ಮಾರುಕಟ್ಟೆ ಶುಲ್ಕಗಳು 
  • ಅಸಮರ್ಪಕ ಮೂಲಭೂತಸೌಕರ್ಯ ಮತ್ತು ಸಾಲದ ಸೌಲಭ್ಯಗಳು 
  • ಮಾಹಿತಿಯಲ್ಲಿ ಅಸಮರೂಪತೆ (ಮಾಹಿತಿ ಒಂದೇ ತೆರನಾಗಿ ಇಲ್ಲದಿರುವುದು) 
  • ಪರವಾನಿಗೆಯಲ್ಲಿ ನಿರ್ಭಂದ 

2. ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020

  • ಲಾಭದಾಯಕ ಬೆಲೆಗಾಗಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಹಾಗೂ ಕೊಳ್ಳುವಲ್ಲಿ “ಆಯ್ಕೆಯ ಸ್ವಾತಂತ್ರ್ಯ” ಇರುತ್ತದೆ 
  • ಎ.ಪಿ.ಎಮ್.ಸಿ ಆವರಣದ ಹೊರಗೆ ಸಮರ್ಥ, ಪಾರದರ್ಶಕ ಮತ್ತು ತಡೆರಹಿತ ಮುಕ್ತ ಅಂತರ ಮತ್ತು ಅಂತರ-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ 
  • ಎ.ಪಿ.ಎಮ್.ಸಿ ಗಳು ಕಾರ್ಯನಿರ್ವಹಿಸುವದನ್ನು ಮುಂದುವರೆಸುತ್ತವೆ: ಈ ಕಾಯ್ಕೆ ರೈತರಿಗೆ ಹೆಚ್ಚುವರಿ ಮಾರುಕಟ್ಟೆ ಮಾರ್ಗಗಳನ್ನು ಒದಗಿಸುತ್ತದೆ. 
  • ಕನಿಷ್ಠ ಬೆಂಬಲ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ 
  • ಕಾರ್ಯವಿಧಾನದ ಅಗತ್ಯತೆಯಂತೆ ಒಂದೇ ದಿನ ಅಥವಾ 3 ಕೆಲಸದ ದಿನಗಳಲ್ಲಿ ರೈತರಿಗೆ ಪಾವತಿ ಮಾಡಬೇಕಾಗುತ್ತದೆ 
  • ಆನ್‍ಲೈನ್ ವ್ಯಾಪಾರವನ್ನು ಮಾಡಬಹುದು 

3. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020.

  • ರಾಷ್ಟ್ರೀಯ ಚೌಕಟ್ಟಿನ ಮೂಲಕ ರೈತರು ಕೃಷಿ ವ್ಯಾಪಾರ ಸಂಸ್ಥೆಗಳು, ಸಂಸ್ಕರಣೆಗಾರರು, ಸಗಟು ವ್ಯಾಪಾರಿಗಳು, ರಫ್ತುದಾರರು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೊತೆಗೆ ಭವಿಷ್ಯದ ಕೃಷಿ ಉತ್ಪನ್ನಗಳ ಮಾರಾಟ ನ್ಯಾಯಯುತ ಮತ್ತು ಪಾರದರ್ಶಕ ಪರಸ್ಪರ ಒಪ್ಪಿದ ಸಂಭಾವನೆ ಬೆಲೆ ಚೌಕಟ್ಟಿನಲ್ಲಿ ನಿರ್ವಹಿಸಲು ಅನುಕೂಲ ಮಾಡಿಕೊಡುವುದು. 
  • ಕೇಂದ್ರ ಸರಕಾರದ ಮಾದರಿ ಕೃಷಿ ಒಪ್ಪಂದಗಳಿಗೆ ಮಾರ್ಗಸೂಚಿಗಳು 
  • ಉತ್ಪನ್ನಗಳ ಬೆಲೆಯನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವುದು 
  • ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದ ವಿವಾದ ಪರಿಹಾರದ ಕಾರ್ಯವಿಧಾನ: ರೈತರು ಮತ್ತು ಖರೀದಾರರ ಹಕ್ಕುಗಳನ್ನು ರಕ್ಷಿಸುವುದು 

4. ಕೃಷಿ ಸುಧಾರಣೆಗಳ ಪ್ರಯೋಜನಗಳು 

  • ಏಕೀಕೃತ ಮಾರುಕಟ್ಟೆ 
  • ರೈತರು ತಮ್ಮ ಉತ್ಪನ್ನಗಳನ್ನು ಎ.ಪಿ.ಎಮ್.ಸಿಗಳ ಜೊತೆಗೆ ಬೇರೆ ಕಡೆ ಎಲ್ಲಿ ಉತ್ತಮ ಬೆಲೆ ದೊರೆಯುತ್ತದೆ ಅಲ್ಲಿ ಮಾರಾಟ ಮಾಡಲು ಅವಕಾಶವನ್ನು ಒದಗಿಸಲಾಗಿದೆ. 
  • ಎ.ಪಿ.ಎಂ.ಸಿ ಯ ಏಕಸ್ವಾಮ್ಯ ಹತೋಟಿಯ ಅಂತ್ಯ 
  • ಕನಿಷ್ಟ ಬೆಂಬಲ ಬೆಲೆಯು ರೈತರಿಗೆ ಸುರಕ್ಷತಾ ಜಾಲವಾಗಿ ಕಾರ್ಯನಿರ್ವಹಿಸುವುದು ಹಾಗೂ ಇದು ಮುಂದುವರೆಯುತ್ತದೆ. 
  • ರೈತರ ಹಕ್ಕುಗಳು ಕಾನೂನಿನ ಚೌಕಟ್ಟಿನ ಒಳಗೆ ರಕ್ಷಿಸಲ್ಪಡುತ್ತವೆ 
  • ಮಾರುಕಟ್ಟೆ ಶುಲ್ಕ, ತೆರಿಗೆ ಇತ್ಯಾದಿಗಳಲ್ಲಿ ಕಡಿತ ಮತ್ತು ಉತ್ತಮ ಬೆಲೆ ಅವಿಷ್ಕಾರ 
  • ರೈತನ ಹೊಲದ ಸನಿಹದಲ್ಲೇ ಮೂಲಸೌಕರ್ಯಗಳ ಅಭಿವೃದ್ಧಿ 
  • ಗುತ್ತಿಗೆ ಕೃಷಿ: ಬೆಲೆ ಆಶ್ವಾಸನೆಯ ಒಂದು ರೂಪ ಮತ್ತು ಆಹಾರ ಸಂಸ್ಕರಣಾ ವಲಯದೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. 
  • ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಕೂಡ ಕೃಷಿ ಲಾಭದಾಯಕವಾಗಬಹುದು
  • ಎಪಿಎಂಸಿ ಮಂಡಿಯಲ್ಲಿ ಮಾರಾಟ ಮಾಡಲು ಅಥವಾ ಬೇರೆ ಯಾವುದೇ ಮಾರಾಟಗಾರರನ್ನು ಆಯ್ಕೆ ಮಾಡಲು ಆಯ್ಕೆಯ ಸ್ವಾತಂತ್ರ್ಯ
  • ಸ್ಪರ್ಧಾತ್ಮಕ ಮಾರುಕಟ್ಟೆಯಿಂದ ಉತ್ತಮ ಬೆಲೆ ದೊರೆಯುವುದು
  • ಯಾವುದೇ ಶುಲ್ಕ, ಕಮೀಶನ್ನ್‌ಗಳು‌ ಇಲ್ಲ. ಉತ್ಪಾದಕರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ದೊಡ್ಡ ಉಳಿತಾಯ.
  • ಗ್ರಾಹಕರ ಪಾವತಿಯಲ್ಲಿ ಉತ್ಪಾದಕರ ಹೆಚ್ಚಿನ ಪಾಲು. ಸಾಗಾಣೆಯ ಖರ್ಚು ಕಡಿಮೆ. ಮಧ್ಯವರ್ತಿಗಳು ಕಡಿಮೆ ಅಥವಾ ಇಲ್ಲವೇ ಇಲ್ಲ.
  • ಗ್ರಾಮೀಣ ಯುವಕರಿಗೆ ವ್ಯಾಪಾರ ಮಾಡಲು ಮತ್ತು ಸರಬರಾಜು ಕೊಂಡಿಯಾಗಲು ಅವಕಾಶ
  • ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ, ಉತ್ತಮ ಬೆಲೆ ಪಡೆಯಲು ಸಾಧ್ಯ
  • ಎಲ್ಲಾ ಕೃಷಿ ಉತ್ಪನ್ನಗಳ ಮಾರಾಟದ ಸ್ವಾತಂತ್ರ್ಯವನ್ನು ದೇಶದೆಲ್ಲಡೆ ಮಾರಾಟ ಮಾಡುವಂತೆ ವಿಸ್ತರಿಸಲಾಗಿದೆ
  • ರೈತರ ಉತ್ಪಾದಕರ ಕಂಪನಿಗಳು ಸಣ್ಣ ರೈತರಿಗೆ ದರ ಚೌಕಾಸಿ ಮಾಡಲು ಹಾಗೂ ಉತ್ತಮ ಬೆಲೆ ಒದಗಿಸಲು ಸಹಾಯವಾಗುತ್ತವೆ.
  • ರಫ್ತು ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ.
  • ಸ್ಥಳೀಯ ಎಸ್‍.ಡಿ.ಎಂ.ಗಳ (ಜಿಲ್ಲಾಧಿಕಾರಿಗಳು) ಮಟ್ಟದಲ್ಲಿ ಕನಿಷ್ಠ ವೆಚ್ಚದೊಂದಿಗೆ ಸಮಯಕ್ಕೆ ಅನುಗುಣವಾಗಿ ವಿವಾದ ಪರಿಹಾರವನ್ನು ಕಾಯಿದೆ ಉತ್ತೇಜಿಸುತ್ತದೆ
  • ಖರೀದಿದಾರರು ಅವತ್ತಿನ ದಿನವೇ ಅಥವಾ ಒಪ್ಪಂದದ ಪ್ರಕಾರ 3 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕು.
  • ಎಲ್ಲಾ ರೈತ ಸಂಸ್ಥೆಗಳನ್ನು “ರೈತರು” ಎಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ರೈತರಂತೆಯೇ ಎಲ್ಲಾ ಲಾಭಗಳು ದೊರೆಯುತ್ತವೆ.
  • ಎಫ್‍ಸಿಐ ಮತ್ತು ಇತರೆ ಸರಕಾರಿ ಎಜೆನ್ಸಿಗಳು ರೈತರಿಂದ ಖರೀದಿ ಮಾಡುವುದನ್ನು ಮುಂದುವರೆಸುತ್ತವೆ.
  • ಕಾಯ್ದೆಯು ಎಪಿಎಂಸಿಯನ್ನು ದುರ್ಬಲಗೊಳಿಸುವುದಿಲ್ಲ. ಇದು ಮಾರುಕಟ್ಟೆ ಹೊರಗೆ ಹೆಚ್ಚುವರಿ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ.
  • ರೈತರು ಖರೀದಾರರನ್ನು ಆಯ್ಕೆ ಮಾಡಬಹುದು ಮತ್ತು ಬೆಲೆಯನ್ನು ನಿರ್ಧರಿಸಬಹುದು
  • ನೋಂದಣಿ  / ವಹಿವಾಟು ಶುಲ್ಕವಿಲ್ಲದೆ ರೈತರು ಎಪಿಎಂಸಿ ಹೊರಗೆ ಉತ್ತಮ ಬೆಲೆ ನೀಡುವ ಖರೀದಿದಾರರಿಗೆ ಮಾರಾಟ ಮಾಡಬಹುದು.
  • ರೈತರ ಹಿತಾಸಕ್ತಿಗಳನ್ನು ಕಾಪಾಡಲು ಈ ಕಾಯ್ದೆ ಸಾಕಷ್ಟು ಮಾರ್ಗಸೂಚಿಗಳನ್ನು ಒದಗಿಸುತ್ತದೆ
  • ಎಪಿಎಂಸಿ ಮಾರುಕಟ್ಟೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ..
  • ಕಾಯ್ದೆಯು ರೈತರ ಭೂಮಿಯನ್ನು ವರ್ಗಾಯಿಸಲು ಪ್ರತಿಬಂಧಿಸುತ್ತದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 

ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು,

ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ,

ಗೋಣಿಕೊಪ್ಪಲು, ಕೊಡಗು ಜಿಲ್ಲೆ,   ದೂರವಾಣಿ : 08274-247274


Search Coorg Media: Coorg's Largest Online Media Network