Header Ads Widget

ಸರ್ಚ್ ಕೂರ್ಗ್ ಮೀಡಿಯ

ರಸ್ತೆ ದುರಸ್ತಿ ಮಾಡದಿದ್ದಲ್ಲಿ ಮಡಿಕೇರಿ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಯ ನಿರ್ಧಾರ


ಮಡಿಕೇರಿ ನಗರದ ಹೊಸ ಬಡಾವಣೆಯ ಸಬ್ ರಿಜಿಸ್ಟರ್ ಕಚೇರಿಯಿಂದ ಜನನಿ ಆಸ್ಪತ್ರೆಯ ಮೂಲಕ ಹಾದುಹೋಗಿ ಹಳೆ ಇಂಡಿಯನ್ ಗ್ಯಾಸ್ ಕಚೇರಿ ಗೌಳಿ ಬೀದಿ ಹಾಗೂ ಡಾಕ್ಟರ್ ಅನಿಲ್ ಚಂಗಪ್ಪ ನವರ ಮನೆಗೆ ಹೋಗುವ ರಸ್ತೆಗಳನು  ಕೂಡಲೇ ಮರು ಡಾಂಬರೀಕರಣ ಮಾಡಿಕೊಡುವಂತೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಿವಾಸಿಗಳು ಇಂದು ಮಡಿಕೇರಿ  ನಗರಸಭೆಯ ಆಯುಕ್ತರನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಯಿತು ಮಡಿಕೇರಿ ನಗರದ ಹಲವು ರಸ್ತೆಗಳು ಹೆಜ್ಜೆ ಹೆಜ್ಜೆಗೂ ಗುಡಿ ಬಿದ್ದಿದ್ದು ವಾಹನ ಸಂಚಾರ ಮಾಡಲು ಪಾದಚಾರಿಗಳು ನಡೆದಾಡಲು ತೊಂದರೆ ಉಂಟಾಗುತ್ತಿರುವ ದರ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಯಿತು ಹಾಗೂ ಕಾಮಗಾರಿಯನ್ನು ಯಾವುದೇ ರೀತಿಯಲ್ಲಿ ಕಳಪೆ ನಡೆಯದಂತೆ ತಮ್ಮ ಸಿಬ್ಬಂದಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಆದೇಶ    ನೀಡಬೇಕೆಂದು ಈ ಸಮಯದಲ್ಲಿ ಕೇಳಿಕೊಳ್ಳಲಾಯಿತು ಆಯುಕ್ತರು ಮಡಿಕೇರಿ ನಗರದ ಎಲ್ಲಾ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಈ ರಸ್ತೆಯ ಕಾಮಗಾರಿಗೆ ಒಂದು ವಾರದ ಒಳಗೆ ಚಾಲನೆ ನೀಡುವುದಾಗಿ ಹೇಳಿದ್ದರು ನಗರ ನಿವಾಸಿಗಳು ಒಂದು ವಾರದಲ್ಲಿ ಕಾಮಗಾರಿ ಆರಂಭವಾಗದಿದ್ದಲಿ  ಸ್ಥಳೀಯ ನಿವಾಸಿಗಳು ಆಟೋ ಚಾಲಕರು ಹಾಗೂ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ರಸ್ತೆತಡೆ ನಡೆಸುವುದಾಗಿ ಹೇಳಿದ್ದಾರೆ ಈ ಸಂದರ್ಭದಲ್ಲಿ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ರವಿ ಗೌಡ. ಸುರೇಶ್ ಕುಮಾರ್. ಸತೀಶ್ ಪೈ. ಲಿಲ್ಲಿ. ನಾಗೇಶ್. ನಗರ ನಿವಾಸಿಗಳಾದ ಮಂಡಿರ ತಮ್ಮಿ. ಹರೀಶ್ ಮುತ್ತಪ್ಪ. ವಸಂತ್ ಹಾಗೂ ಇನ್ನೂ ಹಲವರು ಹಾಜರಿದ್ದರು


Search Coorg Media: Coorg's Largest Online Media Network